ಬಂಟ್ವಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿನ ಸಮಾಜಕಾರ್ಯ ವಿಭಾಗದಆಶ್ರಯದಲ್ಲಿ“ವೃತ್ತಿಜೀವನದಲ್ಲಿ ಸಮಾಜಕಾರ್ಯಕರ್ತನ ಸವಾಲುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನವದೆಹಲಿ ಡಾನ್ ಬಾಸ್ಕೊ ಸೌತ್ ಏಷ್ಯಾ ಪೋರಂ ಫಾರ್‍ಯೂತ್ ಎಟ್‍ರಿಸ್ಕ್ ಸಹ ನಿರ್ದೇಶಕ ತಾರಕ್ ಮಜುಮ್‍ದಾರ್ ಮಾತನಾಡಿ, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಹಂಚಿಕೊಂಡರು ಹಾಗೆಯೆ ವಿದ್ಯಾರ್ಥಿಗಳನ್ನು ಬೇರೆ ಬೇರೆ ಗುಂಪು ಚಟುವಟಿಕೆಗಳಲ್ಲಿ ತೊಡಗಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿ ವಹಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮೇರಿಎಂ.ಜೆ ಉಪನ್ಯಾಸಕ ಚಂದ್ರಎಸ್, ಉದಯಕುಮಾರ್ ಸಿ.ಆರ್, ಉಪನ್ಯಾಸಕ ಅಶೋಕ ಕುಮಾರ್ ಉಪಸ್ಥಿತರಿದ್ದರು.
