ಮಂಗಳೂರು: ತುಳುನಾಡಿನ ಹಾಡುಗಾರರಿಗೆ ಅವಕಾಶ ಕಲ್ಪಿಸಿ, ವಿಡಿಯೋ ಅಲ್ಬಂ ಮೂಲಕ ವಿನೂತನ ಪ್ರಯತ್ನಗಳನ್ನು ಮಾಡುತ್ತಿರುವ ಕಲಾಂಜಲಿ ಕ್ರಿಯೇಶನ್ `ಎನ್ನ ಮೋಕೆ’ ಎನ್ನುವ ತುಳು ವಿಡಿಯೋ ಹಾಡೊಂದನ್ನು ತಯಾರಿಸಿದ್ದು, ಯೂಟ್ಯೂಬ್‍ನಲ್ಲಿ ಬಿಡುಗೊಡೆಗೊಳಿಸಿದೆ.
https://youtu.be/p2_95MSgBk8
ರಾಜೇಶ್ ಭಂಡಾರಿ ಅವರ ಸಂಕಲನ, ನಿರ್ದೇಶನ, ಪ್ರವೀಣ್ ಜಯ ಶೆಟ್ಟಿ ಅವರು ಬರೆದಿರುವ ಸಾಹಿತ್ಯ, ವಿಥುನ್‍ನ್ ರಾಜ್ ವಿದ್ಯಾಪುರ, ಸವಿತಾ ಪುತ್ತೂರು ಅವರ ಗಾಯನವು ಎನ್ನ ಮೋಕೆಗೆ ವಿಶೇಷ ಮೆರಗು ನಡಿದೆ.
ಜಿ.ದೇವರಾಜನ್ ಅವರ ಮೂಲ ಸಂಗೀತ ಸಂಯೋಜನೆಯಿರುವ ಈ ಹಾಡಿಗೆ ಜಗದೀಶ್ ಮಂಜೇಶ್ವರ ಸಲಹೆ-ಸಹಕಾರ ನೀಡಿದ್ದು, ತಿಲಕ್ ರಾಜ್ ಅವರ ಕ್ಯಾಮರ ಕಣ್ಣು ವಿಡಿಯೋ ಅಲ್ಬಂ ಅನ್ನು ಚಿತ್ರೀಕರಿಸಿದೆ. ಆಡಿಯೋ ರೆಕಾರ್ಡಿಂಗ್ ಅನ್ನು ಎಸ್‍ಡಿಎಂ ಸ್ಟೂಡಿಯೋದಲ್ಲಿ ಮಾಡಲಾಗಿದೆ.

