ಬಂಟ್ವಾಳ: ದೀನದಲಿತರ ಸೇವೆಯನ್ನು ತಾಯಿ ಭಾರತಿಯ ಪರಮ ಆರಾಧನೆ ಎಂದು ಜೀವನದಲ್ಲಿ ಅಳವಡಿಸಿ, ಸಮಾಜಕ್ಕಾಗಿ ತನ್ನನ್ನು ಸಮಪಿ೯ಸಿಕೊಂಡ ಮೇರು ವ್ಯಕ್ತಿತ್ವದ ,ಸಜ್ಜನ, ಸ್ವಾಭಿಮಾನಿ, ರಾಷ್ಟ್ರೀಯವಾದ ಮತ್ತು ಹಿಂದುತ್ವದ ಪ್ರತಿಪಾದಕ ಸಂಘದ ಶಿಸ್ತಿನ ಸ್ವಯಂಸೇವಕನಾಗಿದ್ದ ಶರತ್ ಮಡಿವಾಳ ಅವರು ದುಷ್ಕರ್ಮಿಗಳ ತಲವಾರಿನೇಟಿಗೆ ಬಲಿಯಾಗಿ ಇಂದಿಗೆ( ಜು.7)ಒಂದು ವರ್ಷ..
ಶರತ್ ದೇಹವು ಪಂಚಭೂತಗಳಲ್ಲಿ ಲೀನವಾದ ಅವರ ಸ್ವಗೃಹದ ಬಳಿರುವ ಪ್ರಕೃತಿಯ ಮಡಿಲಿನಲ್ಲಿ ಆರ್ ಎಸ್ ಎಸ್ ಕಾರ್ಯ ಕರ್ತರು ಮತ್ತು ಅವರ ಅಭಿಮಾನಿಗಳಿಂದ ಸುಮಾರು 2ಲಕ್ಷ ರೂ. ವೆಚ್ಚದಲ್ಲಿ ನಿಮಿ೯ಸಲಾದ ಸ್ಮಾರಕವು ಇಂದು ( ಶನಿವಾರ) ಬೆಳಿಗ್ಗೆ 10 ಗಂಟೆಗೆ ಲೋಕಪ೯ಣೆ ಗೊಳ್ಳಲಿದ್ದು,ಬಳಿಕ ಅವರ ಸಂಸ್ಮರಣೆಯು ನಡೆಯಲಿದೆ. ಆರ್ ಎಸ್ ಎಸ್ ಪ್ರಮುಖರಾದ ಡಾ.ಪ್ರಭಾಕರಭಟ್ ಕಲ್ಲಡ್ಕ ಅವರು ದಿ.ಶರತ್ ಸ್ಮಾರಕವನ್ನು ಲೋಕಾರ್ಪಣೆ ಗೊಳಿಸಲಿದ್ದು,ಶಾಸಕ ರಾಜೇಶ್ ನಾಯ್ಕ್ ಸಹಿತ ಸಂಘಪರಿವಾರ ಸಂಘಟನೆಯ ಪ್ರಮುಖರು,ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಳೆದೊಂದು ತಿಂಗಳಿನಿಂದ ಸ್ಮಾರಕ ನಿರ್ಮಾಣದ ಕಾರ್ಯ ನಡೆಯುತ್ತಿದೆ.ಇದೀಗ ಅಂತಿಮ ಸ್ಪರ್ಶ ದ ಕೆಲಸ ಬಿರುಸಿನಿಂದ ಸಾಗುತ್ತಿದೆ.ಸ್ಮಾರಕದ ಸುತ್ತ ಅವರಣಗೋಡೆ,ಒಳಭಾಗದಲ್ಲಿ ಭಾರತಮಾತೆ ಹಾಗೂ ಶರತ್ ಅವರು ಯೋಗದ ಭಂಗಿಯಲ್ಲಿ ಕುಳಿತ ಭಾವಚಿತ್ರವಿರುತ್ತದೆ.

WhatsApp Image 2018-07-06 at 12.49.49 PMಸಾಮಾಜಿಕ ಕಳಕಳಿಯ ದಿ.ಶರತ್ ಸ್ಥಳೀಯವಾಗಿ ಜನರಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಾನುವಾಗಿದ್ದು,ಖುದ್ದು ಯೋಗಪಟು ಕೂಡ ಅಗಿದ್ದರು.ಪ್ರತಿನಿತ್ಯ ಮುಂಜಾನೆ ನಂದಾವರ ಕ್ಷೇತ್ರದ ವಠಾರದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿಗೆ ಯೋಗಶಿಕ್ಷಣವನ್ನು ನೀಡುತ್ತಿದ್ದ,ಬಳಿಕ ಮನೆಗಾಗಮಿಸಿ ಹಟ್ಟಿಯಲ್ಲಿ ದನದ ಹಾಲು ಕರೆದು ಅದನ್ನು ಡೈರಿಗೂ ಪೂರೈಸುತ್ತಿದ್ದ. ತಂದೆ ತನಿಯಪ್ಪಮಡಿವಾಳರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರಿಂದ ಶರತ್ ಬಿ.ಸಿ.ರೋಡಿನಲ್ಲಿರುವ ಉದಯಲಾಂಡ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದರು.
ಜು.4ರಂದು ರಾತ್ರಿ: ಕಳೆದ ವರ್ಷ ಸರಿಸುಮಾರು ಮೇ ತಿಂಗಳಿನಿಂದ ಕಲ್ಲಡ್ಕ,ವಿಟ್ಲಮೊದಲಾದೆಡೆ ಸಂಭವಿಸಿದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಿಷೇದಾಜ್ಙೆ ಜಾರಿಯಲ್ಲಿತ್ತು. ಜು.4 ರಂದು ರಾತ್ರಿ ಸುಮಾರು 9.30ರ ಸಮಯ ಶರತ್ ಬಿ.ಸಿ.ರೋಡಿನಲ್ಲಿರುವ ಉದಯಲಾಂಡ್ರಿಯಲ್ಲಿದ್ದರು.ಇನ್ನೇನು ಮನೆಗೆ ಹೋಗುವ ತಯಾರಿಯಲ್ಲಿದ್ದಾಗ ಮೇಲ್ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನೇರವಾಗಿ ಶರತ್ ಅವರ ಲಾಂಡ್ರಿಗೆ ಅಗಮಿಸಿ ಇಸ್ತ್ರೀ ಬಟ್ಟೆ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಶರತ್ ಮೇಲೆ ಏಕಾಏಕಿ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಅಂಗಡಿ ಬಾಗಿಲು ಮುಚ್ಚೋಣ ಎಂದು ಹೇಳಿದ ಶರತ್ ಸುದ್ದಿ ಇಲ್ಲ ಏನೆಂದು ಪಕ್ಕದ ಅಂಗಡಿಯವರು ಕೂಗಿ ಕರೆದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೇ ಬಾರದಾಗ ಅಂಗಡಿಯೊಳಗೆ ಇಣಿಕಿದಾಗ ಶರತ್ ರಕ್ತದ ಮಡವಿನಲ್ಲಿ ಬಿದ್ದಿದ್ದರು.ದುಷ್ಕರ್ಮಿಗಳು ಕೃತ್ಯ ನಡೆಸಿ ಅದಾಗಲೇ ಪರಾರಿಯಾಗಿದ್ದರು.ತಕ್ಷಣ ಅಕ್ಕಪಕ್ಕದ ಅಂಗಡಿಯವರು,ಸ್ಥಳೀಯ ಯುವಕರು ಶರತ್ ನನ್ನು ರಿಕ್ಷಾದಲ್ಲಿ ತುಂಬೆ ಆಸ್ಪತ್ರೆಗೆ ಸಾಗಿಸಿದರು , ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಶರತ್ ಕೊನೆಗೂ ಬದುಕುಳಿಯದೆ ಜು.6 ರಂದು ರಾತ್ರಿ ಹೊತ್ತಿನಲ್ಲಿ ಕೊನೆಯುಸಿರಳೆದಿದ್ದಾರೆಂದುಘೋಷಿಸಲಾಗಿತ್ತು. ಮರುದಿನ ಅಂದರೆ ಜು. 7ರಂದು ಆಸ್ಪತ್ರೆಯಿಂದ ಮೃತದೇಹವನ್ನು ಮೆರವಣಿಗೆಯ ಮೂಲಕ ಸಜೀಪಮುನ್ನೂರಿನಲ್ಲಿರುವ ಅವರ ಸ್ವಗೃಹಕ್ಕೆ ತರಲಾಗಿತ್ತು.ಈಸಂದರ್ಭ ಬಿ.ಸಿ.ರೋಡಿನಲ್ಲಿ ಗೊಂದಲದ ವಾತಾವರಣವು ಸೃಷ್ಠಿಯಾಗಿತ್ತು.

IMG-20180703-WA0053ಸಂಜೆಯ ವೇಳೆ ಶರತ್ ಅವರ ಅಂತ್ಯಕ್ರಿಯೆ ಮನೆಪಕ್ಕದ ಜಮೀನಿನಲ್ಲಿ ನೆರವೇರಿತ್ತು.ಇದೀಗ ಅವರ ವಿನಾಕಾರಣ ಸಾವಿಗೆ ಇಂದು (ಜು.7) ವರ್ಷ ಪೂರೈಸುತ್ತಿದೆ. ಆದರೆ ದಿ.ಶರತ್ ನೆನಪು ಮಾತ್ರ ಸ್ಥಳೀಯರಲ್ಲಿ ಇನ್ನು ಮಾಸಿಲ್ಲ. ಅದಕ್ಕಾಗಿಯೇ ಅವರ ಅಂತ್ಯಕ್ರಿಯೇ ನಡೆದ ಸ್ಥಳದಲ್ಲಿ ಅವರ ಅಭಿಮಾನಿಗಳು ಸದಾ ಶರತ್ ಸ್ಮರಣೆ ಉಳಿಯುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಿಸಿದ್ದಾರೆ.ಅವರ ತಂದೆ ತನಿಯಪ್ಪ ಮಡಿವಾಳ ಅವರು,ಸ್ಥಳೀಯರ ಪ್ರೀತಿಗೆ ಮಾರುಹೋಗಿ ಇದಕ್ಕೆಸಹಮತ ವ್ಯಕ್ತಪಡಿಸಿದ್ದಾರೆ. ಮನೆಯ ಆಧಾರಸ್ತಂಭವಾಗಿದ್ದ ಒಬ್ಬನೇ ಮಗ ಶರತ್ ನನ್ನು ಕಳಕೊಂಡು ವರ್ಷವಾದರೂ ಅತನ ನೆನಪು ಇನ್ನು ನಮ್ಮನ್ನು ಕಾಡುತ್ತಿದೆ.ಅತನ ಹತ್ಯೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಶರತ್ ತಂದೆ ತನಿಯಪ್ಪ ಮಡಿವಾಳ ಅವರು ಈಗಲೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಬಂದೋಬಸ್ತ್: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಹತ್ಯೆಯಾಗಿ ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಬಿ.ಸಿ.ರೋಡು,ಬಂಟ್ವಾಳ,ಕಲ್ಲಡ್ಕ,ಸಜೀಪ ಮೊದಲಾದೆಡೆಗಳಲ್ಲಿ ಮುಂಜಾಗೃತಾಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ

By suddi9

Leave a Reply

Your email address will not be published. Required fields are marked *