ಸುದ್ದಿ9ಕೈಕಂಬ: ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು. ಗೋವಿನಿಂದ ದೊರಕುವ ಸರಕುಗಳು ಸಾತ್ವಿಕ ರೂಪಿಯಾಗಿವೆ. ಗೋವು ಪೂಜ್ಯನೀಯವಾಗಿದ್ದು ಅವುಗಳಿಂದ ದೊರಕುವ ವಸ್ತುಗಳು ಪವಿತ್ರವಾಗಿದೆ. ಇಂಥಾ ಗೋವುಗಳನನು ದೇವರಿದ್ದಾನೆ ಎಂಬಂಥ ರೀತಿಯಲ್ಲಿ ಕಾಯಬೇಕು. ನಮಗೆ ಏನೂ ಬೇವೆಂದು ತಿರಸ್ಕರಿಸಿದ ವಸ್ತುಗಳನ್ನು ತಿಂದು ಬದುಕುವ ಸಾತ್ವಿರೂಪಿ ಗೋಮಾತೆಯನ್ನು ನಾವು ರಕ್ಷಿಸಬೇಕೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕೆ. ಹರಿನಾರಾಯಣದಾಸ ಅ ಣ್ಣ ಆಶೀರ್ವಚನ ನೀಡಿ ಅಭಿಪ್ರಾಯ ಪಟ್ಟರು.
ಅವರು ಗುರುಪುರ ಕೈಕಂಬದಲ್ಲಿ ನಡೆದ 31ನೇ ಸಾರ್ವಜನಿಕ ಗಣೇಶೋತ್ಸವಾಗಿರುವ ಕೈಕಂಬ ಚೌತಿ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮಾತಾಡುತ್ತಿದ್ದರು.
ಶ್ರೀಕೃಷ್ಣ ವಿಶ್ವಂಭರ ರೂಪಿ. ಆತ ನಮಗೆ ಬೇಕಾದ ಎಲ್ಲವನ್ನೂ ಒದಗಿಸಿದ್ದಾನೆ. ವಿಶ್ವಂಭರನಾದ ಶ್ರೀಕೃಷ್ಣ ಪರಮಾತ್ಮನಿಂದ ದತ್ತವಾದ ಈ ಭೂಮಿಯನ್ನು ಗಣಪತಿ ಧರಿಸಿದ್ದಾನೆ. ಇಂಥಾ ಭಗವಂತ ಗಣಪತಿಯನ್ನು ಹಿಂದೂಗಳೂ ಪೂಜಿಸಬೇಕು. ಸಕಲ ಗಣಗಳ ಒಡೆಯನಾದ ಗಣೇಶನನ್ನು ಪೂಜಿಸಲು ಹರಿಯಾಜ್ಞೆಯೇ ಇದೆ. ಆದ್ದರಿಂದ ಭಗವಂತನಿಂದ ದತ್ತವಾದ ಈ ಭೂಮಿಯನ್ನು ಗಣೇಶನ ಕೃಪೆಯಂತೆ ರಕ್ಷಿಸುವ ಕೆಲಸವನ್ನು ಮಾಡಿಕೊಂಡು, ನಮ್ಮ ನಮ್ಮ ಜಾತಿ ಮತಗಳ ಸಂಕೋಲೆಯಿಂದ ಹೊರಬಂದು ಪ್ರತಿಯೋರ್ವರೂ ಬ್ರಹ್ಮಾಂಡನಾಯಕನಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನಂತರ ಅನೇಕ ಶಾಲೆಯ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ, ವಿವಿಧ ಸ್ಪಧರ್ೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯ್ತು.
ಸಮಾರಂಭದ ಬಳಿಕ ಆಕರ್ಷಕ ಸ್ಥಬ್ದ ಚಿತ್ರ ಮೆರವಣಿಗೆಯನ್ನು ನಡೆಸಲಾಯ್ತು. ಕೈಕಂಬದಿಂದ ಸೂರಲ್ಪಾಡಿ ತನಕ ಗಣೇಶನನ್ನು ಮೆರವಣಿಗೆಯ ಮೂಲಕ ಕರೆದು ಕೊಂಡು ಬಂದು ಅಲ್ಲಿಂದ ಗುರುಪುರದ ಪಲ್ಗುಣಿ ನದಿಯಲ್ಲಿ ವಿಸಜರ್ಿಸಲಾಯ್ತು.
ಸುಗ್ಗಿ ಚಿಟ್ಸಿ(ಪ್ರೈ) ಲಿಮಿಟೆಡ್ ಹಾಗೂ ದಾಸ್ ಪ್ರಮೋಶನ್ಸ್, ಮಂಗಳೂರು ಇದರ ಆಡಳಿತ ನಿದರ್ೇಶಕರಾದ ಅನಿಲ್ ದಾಸ್ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಭಾಷಣಕಾರರಾಗಿ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರಗತಿಪರ ಕೃಷಿಕರಾದ ಜೀವಂಧರ್ ಕುಮಾರ್ ಹೊಸಮನೆ, ಸರೋಜಿನಿ ಮಧುಸೂಧನ ಕುಶೆಶ್ಯಕ್ಷಣಿಕಸಂಸ್ಥೆಗಳ ಪ್ರಾಂಶುಪಾಲ ಕೆ. ಕೃಷ್ಣ ಉಪಾಧ್ಯಾಯ, ರೋಶನಿ ನಿಲಯ ಮಂಗಳೂರು ಇಲ್ಲಿನ ಮಾನಸಿಕ ತಜ್ಞರಾದ ಡಾ. ರಮೀಲಾ ಶೇಖರ್, ಕೋಶಾಧಿಕಾರಿ ಕೆ. ಶ್ರೀಧರ್ ರಾವ್, ಅಧ್ಯಕ್ಷ ವಿನೋದ್ ಮಾಡ, ಮಹೇಶ್ ಶೆಟ್ಟಿ, ಮಾಧಮಯ್ಯ ಮತ್ತಿತರರು ಉಪಸ್ಥಿತರಿದ್ದರು.











