ಉಡುಪಿ:ಕರ್ನಾಟಕರಾಜ್ಯ ವೈದ್ಯಕೀಯ ಪ್ರತಿನಿಧಿಗಳ,ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರಇದರ ವತಿಯಿಂದ ಜೂನ್.30 ಶನಿವಾರ ನಗರದಕಿದಿಯೂರು ಹೋಟೆಲ್‍ನ ಮಾಧವಕ್ರಷ್ಣ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾಷಾತಜ್ಞ ನಾಡೋಜ ಕೆ.ಪಿ ರಾವ್ ವೈದ್ಯರ ,ಮತ್ತು ರೋಗಿಗಳ ಸಂಭಂಧ ಹದಗೆಡುತ್ತಿರುವುದು ಸರಿಯಲ್ಲ ವೈದ್ಯರುಸಮಾಜದಆರೋಗ್ಯವನ್ನುಕಾಪಾಡುವದೃಷ್ಟಿಯಿಂದತನ್ನ ವೈಯತ್ತಿಕ ಬದುಕನ್ನು ಬದಿಗೊತ್ತಿ ಸಮಾಜದಲ್ಲಿಅಪೂರ್ವವಾದ ಸೇವೆ ಸಲ್ಲಿಸುತ್ತಿದ್ದಾರೆಅವರನ್ನುಗೌರವಿಸುವುದು ನಮ್ಮಕರ್ತವ್ಯಎಂದರು.
ಹಲವಾರುಜನ ವೈದ್ಯರು ಸಮಾಜದಲ್ಲಿ ಆಡಳಿತವನ್ನು ನಡೆಸುತ್ತಿರುವುದುಕೂಡ ಪ್ರಶಂಸನೀಯಎಂದರು.
ಮುಖ್ಯಅತಿಥಿ ಮಣಿಪಾಲ ಕೆ.ಎಂ.ಸಿಯ ಸಹಾಯಕ ವೈದ್ಯಕೀಯಅಧೀಕ್ಷಕರಾದಡಾ|| ಪದ್ಮರಾಜ್ ಹೆಗ್ಡೆ,ವೈದ್ಯರು ಮತ್ತು ರೋಗಿಗಳ ಮದ್ಯೆಕೊಂಡಿಯಾಗಿ ನಮ್ಮ ವೈದ್ಯಕೀಯ ಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿದ್ದಾರೆ,ಅಲ್ಲದೆ ಹಲವಾರುಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಮಾಜದ ಪರಿವರ್ತನೆಗೆ ನಾಂದಿ ಹಾಡಿದ್ದಾರೆಎಂದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಶ್ರೀನಿಧಿ ಮೆಡಿಕಲ್ಸ್ ನ ಡಾ|| ಕೃಷ್ಣರಾಜ್ ಭಟ್,ಮಿತ್ರಆಸ್ಪತ್ರೆ ಮನೋವೈದ್ಯರಾದಡಾ|| ಶ್ರೀಪತಿ.ಎಂ.ಭಟ್,ಕೆಂ.ಎಂ.ಸಿ ಮಣಿಪಾಲದ ಮೂಳೆ ಮತ್ತು ಎಲುಬು ತಜ್ಞರಾದಡಾ|| ಸೀಮಾಂಚಲ್ ಪ್ರಸಾದ್ ಮೊಹಾಂತಿ,ಕುಂದಾಪುರದ ನೇತ್ರತಜ್ಞಡಾ||ವಿ.ಎನ್ ಹೊಳ್ಳ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಯಂಟ್ಸ್‍ಗ್ರೂಪ್ ನ ಫೆಡರೇಶನ್ ಮಾಜಿಅದ್ಯಕ್ಷ ಮಧುಸೂಧನ್ ಹೇರೂರು ಪ್ರಸ್ಥಾವನೆಗೈದರು.ವೇದಿಕೆಯಲ್ಲಿವೈದ್ಯಕೀಯ ಪ್ರತಿನಿನಿಧಿ ಸಂಘದಅದ್ಯಕ್ಷ ಅಣ್ಣಯ್ಯದಾಸ್,ಕಾರ್ಯದರ್ಶಿ ಶ್ರೀನಾಥ್ ಕೋಟ,ಜಯಂಟ್ಸ್‍ಅದ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್,ಕಾರ್ಯದರ್ಶಿ ಸುಂದರ್ ಪೂಜಾರಿ ಮೂಡುಕುಕುಡೆ,ಮುಂತಾದವರಿದ್ದರು.ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರುಗಳಿಗೆ ಗಿಡ ವಿತರಿಸಲಾಯಿತು.ಸತೀಶ್ ಹೆಗ್ಡೆ,ರವಿರಾಜ್ ಹೆಚ್.ಪಿ,ಪ್ರಸನ್ನಕಾರಂತ್,ಉದಯ ಭಂಡಾರ್‍ಕಾರ್,ವಿವೇಕಾನಂದ ಶೆಣ್ಯೆ,ವೆಂಕಟೇಶ್ ಭಟ್ ಸನ್ಮಾನಿತರ ಪರಿಚಯಿಸಿದರು.ರಾಘವೇಂದ್ರ ಪ್ರಭುಕರ್ವಾಲು ನಿರೂಪಿಸಿದರು.ಸುಬ್ರಮಣ್ಯ ಆಚಾರ್ಯ ವಂದಿಸಿದರು.ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.