ಗುರುಪುರ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮಾತೃಮಂಡಳಿ, ದುರ್ಗಾವಾಹಿನಿ ವಜ್ರದೇಹಿ ಶಾಲೆ ಗುರುಪುರ ಹಾಗೂ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ಕುಂಟಿಕಾನ, ಮಂಗಳೂರು) ಜಂಟಿ ಆಶ್ರಯದಲ್ಲಿ ಜುಲೈ ಒಂದರಂದು ಬೆಳಿಗ್ಗೆ 8.30ಕ್ಕೆ ಗುರುಪುರ ಶ್ರೀ ಸತ್ಯದೇವತಾ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಲಿದೆ.
ಶಾಸಕ ಭರತ್ ಶೆಟ್ಟಿ ಶಿಬಿರ ಉದ್ಘಾಟಿಸಲಿದ್ದಾರೆ. ಎ ಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಅರವಿಂದ ಪಿ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಚಂದ್ರಕಾಂತ ಭಟ್(ಧರ್ಮದರ್ಶಿ, ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರ, ಗುರುಪುರ), ಭುಜಂಗ ಕುಲಾಲ್(ವಿಭಾಗ ಸಂಚಾಲಕ, ಬಜರಂಗ ದಳ, ಮಂಗಳೂರು), ಪ್ರಭಾ ಪಿ ರಾವ್(ಮ್ಯಾನೇಜರ್ ಸಿಂಡಿಕೇಟ್ ಬ್ಯಾಂಕ್, ಗುರುಪುರ), ಸುಶೀಲಾ ಎನ್ ಭಂಡಾರಿ(ಚಾಮಾಣಿ ಗುರುಪುರ), ವಿಷ್ಣು ಕಾಮತ್(ಅಧ್ಯಕ್ಷ, ವಿಹಿಂಪ, ಗುರುಪುರ ಪ್ರಖಂಡ), ನವೀನ್ ಮೂಡುಶೆಡ್ಡೆ(ಸಂಚಾಲಕರು, ಬಜರಂಗ ದಳ, ಗುರುಪುರ ಪ್ರಖಂಡ), ನಾಗೇಶ ಕೊಟ್ಟಾರಿ(ಅಧ್ಯಕ್ಷ, ವಿಹಿಂಪ ಗುರುಪುರ) ಹಾಗೂ ಗೋಪಾಲಕೃಷ್ಣ(ಕ್ವಾಲಿಟಿ ಮತ್ತು ಟೆಕ್ನಿಕಲ್ ಮ್ಯಾನೇಜರ್ ಎ ಜೆ ಆಸ್ಪತ್ರೆ) ಭಾಗವಹಿಸಲಿದ್ದಾರೆಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
