ಉಡುಪಿ: ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್)ಉಡುಪಿ ಮತ್ತು ಬಡಗುಬೆಟ್ಟು ಕ್ರೆಡಿಟ್.ಕೋ.ಸೋಸೈಟಿ ಇದರ ವತಿಯಿಂದ ರಾಷ್ಟೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಮತ್ತು ಸಾಧಕ ವೈದ್ಯರಿಗೆ ಗೌರವಿಸುವ ಕಾರ್ಯಕ್ರಮ ಜುಲ್ಯೆ.2 ಸೋಮವಾರ ಸಂಜೆ 7 ಗಂಟೆಗೆ ಸರಿಯಾಗಿ ನಗರದ ಬಡಗುಬೆಟ್ಟು ಸೋಸೈಟಿಯ ಜಗನ್ನಾಥ ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅದ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|| ಸುಶೀಲ್ ಜತ್ತನ್ನ ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ ಮಣಿಪಾಲದ ಡಾ|| ರಾಜಗೋಪಾಲ್ ಶೆಣ್ಯೆ,ಸೋಸೈಟಿಯ ಜಿ.ಎಂ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಲಿರುವರು ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು,ಸಿಬ್ಬಂದಿಗಳು ಅಲ್ಲದೆ ನಗರದ ಹಲವಾರು ವೈದ್ಯರು ಭಾಗವಹಿಸಲಿರುವರು.ಸಾಧಕ ವೈದ್ಯರಿಗೆ ಮತ್ತು ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
