ವಾಮಂಜೂರು: ಮಕ್ಕಳು ಮನೆಯ ಬೆಳಕು. ನಾಳಿನ ನಾಡಿನ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕಾದರೆ ಎಳವೆಯಲ್ಲಿಯೇ ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ ಎಂದುಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ವಂ ಭಗಿನಿ ಮಾರಿಯೋಲಾ ಹೆತ್ತವರಿಗೆಕರೆನೀಡಿದರು. ಅವರು ಸೈಂಟ್‍ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ಸಂಚಾಲಕರೂ ಶಿಕ್ಷಕ-ರಕ್ಷಕ ಸಂಘದಅಧ್ಯಕ್ಷರ ನೆಲೆಯಲ್ಲಿ ಆಗಮಿಸಿ ಅವರು ಮಾತನಾಡಿದರು.SONY DSC
ಈ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಶೈಕ್ಷಣಿಕ ಸಾಲಿನ ನೂತನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಆಯ್ಕೆ ಪ್ರಕ್ರಿಯೆ ನಡೆಯಿತು. ಶಿಕ್ಷಕ-ರಕ್ಷಕ ಸಂಘದಉಪಾಧ್ಯಕ್ಷರಾಗಿ ಶ್ರೀಮತಿ ಗ್ರೆಟ್ಟಾ ಮಿನೇಜಸ್ ಹಾಗೂ ಖಜಾಂಜಿಯಾಗಿ ಶ್ರೀ ಸಂಪತ್‍ರವರನ್ನುಅವಿರೋಧವಾಗಿಆಯ್ಕೆಮಾಡಲಾಯಿತು. ಗತವರ್ಷದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಪಿಟಿಎ ನಿಕಟಪೂರ್ವಾಧ್ಯಕ್ಷರಾದ ಶ್ರೀ ಅಬ್ದುಲ್ ಹಮೀದ್‍ರವರಿಗೆ ಸನ್ಮಾನಿಸಲಾಯಿತು.
ತದನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ವೆಂಕಟೇಶ್‍ಅಮಿನ್, ಆಡಳಿತ ಮುಖ್ಯಸ್ಥರು, ಶ್ರೀದೇವಿತಾಂತ್ರಿಕ ವಿದ್ಯಾಲಯ ಮಂಗಳೂರುಇವರಿಂದ ವಿದ್ಯಾರ್ಥಿಗಳ ಕಲಿಕಾ ಸಂವರ್ಧನೆಗೆ ಹೆತ್ತವರುಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನಗೈದರು. ಪ್ರಾಂಶುಪಾಲೆ ಭಗಿನಿ ಸಾಧನಾನೆರೆದ ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸವಿತಾ ಮಿನೇಜಸ್ ವರದಿ ವಾಚಿಸಿದರು, ಶ್ರೀಮತಿ ಹರಿಣಾಕ್ಷಿಗತ ವರ್ಷದಆಯವ್ಯಯ ಮಂಡಿಸಿದರು. ಶ್ರೀ ಅಬ್ದುಲ್‍ರೆಹಮಾನ್‍ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *