ಕೈಕಂಬ: ಮಿಜಾರು-ಎಡಪದವು ಗಾಣಿಗರ ಯಾನೆ ಸಫಲಿಗ ಸೇವಾ ಸಂಘ ಹಾಗೂ ದಿ| ಕೆ.ವಿ. ಮಿಜಾರ್ ಇವರ ಸ್ಮರಣಾರ್ಥ ಅವರ ಪುತ್ರ ಲಕ್ಷ್ಮೀಶ ಕೆ. ಮಿಜಾರ್ ಅವರ ಸಹಭಾಗಿತ್ವದಲ್ಲಿ ಸಮಾಜದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾವಂತರನ್ನು ಸನ್ಮಾನಿಸುವ ಕಾರ್ಯಕ್ರಮವು ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಸಂಘದ ಅಧ್ಯಕ್ಷರಾದ ಭಾಸ್ಕರ್ ಎಸ್. ಎಡಪದವು ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.2506malali6

ಸಮಾರಂಭವನ್ನು ದೀಪ ಬೆಳಗಿಸಿ ದ.ಕ ಜಿಲ್ಲಾ ಕಾಂಗ್ರೆಸ್‍ನ ಉಪಾಧ್ಯಕ್ಷರು ಹಾಗೂ ರಾಜ್ಯ ಕಾಂಗ್ರೆಸ್‍ನ ಹಿಂದುಳಿದ ಮೋರ್ಛಾದ ಅಧ್ಯಕ್ಷ ಮಾಧವ ಮಾವೆ ಉದ್ಘಾಟಿಸಿದರು. ಹೆತ್ತವರು ತಮ್ಮ ಮಕ್ಕಳಿಗಾಗಿ ಸಮಯವನ್ನು ಮೀಸಲಿಡಬೇಕು ತಮ್ಮ ಮಕ್ಕಳು ಇಂಜಿನಿಯರ್ ಆಗಬೇಕು ಅಥವಾ ಡಾಕ್ಟರ್ ಆಗಬೇಕು ಎಂಬ ಕನಸು ಕಾಣುವ ಹೆತ್ತವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರಮ ಪಡಬೇಕು. ಬಳಿಕ ತಮ್ಮ ಕನಸು ನನಸಾದಾಗ ತಂದೆ ತಾಯಿಗಳ ಮನದಲ್ಲಿ ಸಂತೃಪ್ತ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸದುಪಯೋಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಈ ವೇಳೆ ವೈದ್ಯಕೀಯ ಸ್ನಾತಕೋತ್ತರ ಪದವಿ ರೆಡಿಯೋ ಡಯಾಗ್ನಿಸಿಸ್‍ನಲ್ಲಿ ಎಂಟನೇ ರ್ಯಾಂಕ್ ಪಡೆದ ಡಾ|| ಮಹೇಶ್ ಮಿಜಾರ್, ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಕು| ರಚನಾ ಮಿಜಾರ್ ಹಾಗೂ ನೆಟ್‍ಬಾಲ್‍ನಲ್ಲಿ ರಾಷ್ಟ್ರೀಯ ಆಟಗಾರರಾದ ಕೀರ್ತನ್ ಹಾಗೂ ಅಭಿಲಾಷ್ ಹಾಗೂ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ ಕು| ಜಯಲಕ್ಷ್ಮಿ, ದೇಶದ ವೇಗದ ಗ್ಲೋ ಆರ್ಟ್ ಚಿತ್ರಗಾರ್ತಿ-ಚಲನಚಿತ್ರ ಹಾಡುಗಾರ್ಥಿ ಕು| ಶಬರಿ ಗಾಣಿಗ, ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಕು| ವಿನಿಷಾ ಹಾಗೂ ಸಾತ್ವಿಕ್ ಬಂಗೇರಾ ಇವರುಗಳನ್ನು ಸನ್ಮಾನಿಸಲಾಯಿತು. ಕು| ಶಬರಿ ಗಾಣಿಗ, ಡಾ|| ಮಹೇಶ್ ಮಿಜಾರ್, ಕು| ಜಯಲಕ್ಷ್ಮಿ ಸನ್ಮಾನಕ್ಕೆ ಪ್ರತಿವಂದಿಸಿದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಗಾಣಿಗ ಸಂಘದ ಉಪಾಧ್ಯಕ್ಷ ಹಾಗೂ ಕರವಾಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸಂಜೀವ ಅಡ್ಯಾರ್, ಮಂಜೇಶ್ವರ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಕಮಲಾಕ್ಷ, ಕೆನರಾ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ಲತಾ ಭಾಸ್ಕರ್ ಇವರು ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ವಿತರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಸಂಘದ ಪದಾಧಿಕಾರಿ ಚಂದ್ರಶೇಖರ್ ಎಸ್. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ಹಾಗೂ ರಸಪ್ರಶ್ನೆ ನಡೆಸಿಕೊಟ್ಟರು.

ಸಂಘದ ಉಪಾಧ್ಯಕ್ಷ ಸಂಜೀವ ಸಪಳಿಗ, ಕೋಶಾಧಿಕಾರಿ ಸದಾನಂದ ಸಪಳಿಗ ಕನ್ನೋರಿ, ಜೊತೆ ಕಾರ್ಯದರ್ಶಿ ಪ್ರಸಾದ್ ಕುಮಾರ್, ಯುವ ವಿಭಾಗದ ಅಧ್ಯಕ್ಷ ಸಂತೋಷ್ ಕುಮಾರ್, ಯುವ ವಿಭಾಗದ ಸಂದೀಪ್ ಸಮಿತ್ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷರಾದ ಭಾಸ್ಕರ್ ಎಸ್. ಎಡಪದವು ಪ್ರಸ್ತಾವನೆ ಹಾಗೂ ಸ್ವಾಗತಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಸ್ವಂತ ಸಮುದಾಯ ಭವನ ಯೋಜನೆಯ ಮಾಹಿತಿ ನೀಡಿದರು.
ಉಪನ್ಯಾಸಕರಾದ ಮಾಧವ ಮೂಡುಶೆಡ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಕಾರ್ಯದರ್ಶಿ ನಾರಾಯಣ ಎಸ್. ಮಿಜಾರ್ ವಂದನಾರ್ಪಣೆ ಮಾಡಿದರು.

By Suddi9

Leave a Reply

Your email address will not be published. Required fields are marked *