ಬಂಟ್ವಾಳ : ಸರ್ವಶಿಕ್ಷಣ ಅಭಿಯಾನದಲ್ಲಿ ಬರುವ ಶಿಕ್ಷಕರಿಗೆ ಮಾರ್ಚ್ 2018ರಿಂದ ಈ ತನಕ ವೇತನ ಪಾವತಿಯಾಗದ ಬಗ್ಗೆ ಇತ್ತೀಚೆಗೆ ಸರಕಾರಿ ಶಿಕ್ಷಕರ ಪ್ರೌಶಿಕ್ಷಕರ ಸಂಘ ತಾಲೂಕುಘಟಕಇತ್ತೀಚೆಗೆ ಬಂಟ್ವಾಳ ಕ್ಷೇತ್ರದ ಶಾಸಕರಾದರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮನವಿ ನೀಡಿದ್ದರು.232256655

ಬಂಟ್ವಾಳ ತಾಲೂಕಿನ ಸರಕಾರಿ ಪ ಪೂ ಕಾಲೇಜ್ ಪಿಲಾತಬೆಟ್ಟುಇಲ್ಲಿನಎಲ್ಲಾ 6 ಉಪನ್ಯಾಸಕ ಹುದ್ದೆಗಳನ್ನು ಇತರ ಕಾಲೇಜುಗಳಿಗೆ ವರ್ಗಾಯಿಸಿದ್ದು ಸದ್ರಿಕಾಲೇಜನ್ನು 2018-19 ಸಾಲಿನಲ್ಲಿ ಮುಂದುವರಿಸದಂತೆ ಆದೇಶಿಸಲಾಗಿತ್ತು ಈ ಬಗ್ಗೆ ಬಂಟ್ವಾಳ ಕ್ಷೇತ್ರದ ಶಾಸಕರಾದರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರ ಸ್ವಾಮಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿಕ್ಷೇತ್ರದಲ್ಲಿ ಮುಂದಿನ ಅವಧಿಯಲ್ಲಿ ನಡೆಯಲಿರುವಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಬಂಟ್ವಾಳದ ಪ್ರಸಕ್ತ ಸಮಸ್ಯೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದರು. ಶಾಸಕರ ಮಾತನ್ನು ಆಲಿಸಿದ ಮಾನ್ಯ ಮುಖ್ಯಮಂತ್ರಿಗಳು ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ ಉಪಸ್ಥಿರಿದ್ದರು.

By suddi9

Leave a Reply

Your email address will not be published. Required fields are marked *