ಪುತ್ತೂರು: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ 12ಶಾಖೆ ತಾಲೂಕಿನ ಕೋರ್ಟ್ ರಸ್ತೆಯ ಪ್ಯೆಲ್ಯಾಂಡ್ಸ್ ಕಟ್ಟಡದ 1ನೇ ಮಹಡಿಯಲ್ಲಿ ಜೂ.17ರಂದು ಉದ್ಘಾಟನೆಗೊಳ್ಳಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಲಿದ್ದು, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು,ಮುಳಿಯ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ
ಸ್ವಾಮೀಜಿ, ಮೈದೇ ದೆವುಸ್ ಚರ್ಚಿನ ಧರ್ಮಗುರು ವಂದನೀಯ ರೆ| ಫಾ| ಅಲ್ಪ್ರೇಡ್ ಪಿಂಟೊ ಮತ್ತು ಬದ್ರಿಯ ಮಸೀದಿಯ ಧರ್ಮಗುರು ಎಸ್. ಬಿ. ಮಹಮ್ಮದ್ ದಾರಿಮಿ ದಿವ್ಯ ಉಪಸ್ಥಿತರಿರುವರು.
ಭದ್ರತಾ ಕೊಠಡಿಯ ಉದ್ಘಾಟನೆಯನ್ನು ನಳಿನ್ ಕುಮಾರ ಕಟೀಲು, ಸೇಫ್ ಲಾಕರ್ ಉದ್ಘಾಟನೆಯನ್ನು ಪುತ್ತೂರು ನಗರ ಪಾಲಿಕೆ ಅಧ್ಯಕ್ಷೆ ಜಯಂತಿ ಬಲ್ನಾಡು, ಕಂಪ್ಯೂಟರ್ ಉದ್ಘಾಟನೆಯನ್ನು ಪುತ್ತೂರು ನಗರಪಾಲಿಕೆ ಸದಸ್ಯ ರಾಜೇಶ್ ಬನ್ನೂರು, ಠೇವಣಿ ಪತ್ರ ಬಿಡುಗಡೆಯನ್ನು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಬಿ. ಕೆ. ಸಲೀಂ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸುಧಾಕರ ಶೆಟ್ಟಿ ಬಿ.ಎ., ಪುತ್ತೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಭಕ್ತ, ಪುತ್ತೂರು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳೀತ ಮೊಕ್ತೇಸರ ಸತೀಶ್ ಪಿ. ನಾಯಕ್, ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರ ಸಂಘದ ನಿರ್ದೇಶಕ ಬಿ.ಎಸ್. ಕುಲಾಲ್, ಪುತ್ತೂರು ತೆರಿಗೆ ಸಲಹೆಗಾರ ಕೃಷ್ಣ ಎಂ. ಅಳಿಕೆ, ಪುತ್ತೂರು ಕುಲಾಲ ಸಂಘ ಅಧ್ಯಕ್ಷ ದಿನೇಶ್ ಪಿ.ವಿ. ಭಾಗವಹಿಸಲಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್ ಮತ್ತು ಪ್ರ.ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

