DSC_0002

ಕಲ್ಲಡ್ಕ: ದಿ.ಕೊ.ಶಿವಪ್ಪ ಇವರ ಶ್ರದ್ಧಾಂಜಲಿ  ಕಾರ್ಯಕ್ರಮ ಇಲ್ಲಿನ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ವೇಳೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್‍ ಮಾತನಾಡಿ, ಶಿವಪ್ಪ ಅವರು ಸಮಾಜ ಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕಾಗಿ ತನ್ನ ಜೀವನವನ್ನು ಸಮರ್ಪಿಸಿಕೊಂಡು, ರಾಷ್ಟ್ರಿಯ ಸ್ವಯಂಸೇವಕ ಸಂಘ, ಶ್ರೀರಾಮ ವಿದ್ಯಾಕೇಂದ್ರ ಹಾಗೂ ಹಿಂದೂ ಸಮಾಜ ಕ್ಕೋಸ್ಕರ ಸಮರ್ಪಣಾ ಭಾವದಿಂದ ತನ್ನ ಜೀವನವನ್ನೇ  ಸಮರ್ಪಿಸಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಮಾಜಿ ಶಾಸಕರಾದ ಪದ್ಮನಾಭಕೊಟ್ಟಾರಿ, ವಿಟ್ಲ ಸಂಘಚಾಲಕರಾದ ವೆಂಕಟೇಶ ಅಮೈ, ನೋಣಯ್ಯ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.

ವಿನೋದ್ ಶ್ರೀಮಾನ್‍ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

DSC_0018

 

 

By suddi9

Leave a Reply

Your email address will not be published. Required fields are marked *