(file photo)

ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಸಂಘನಿಕೇತನದಲ್ಲಿ, ತಾ. 29.08.2014ನೇ ಶುಕ್ರವಾರದಿಂದ 5 ದಿನಗಳ ಪರ್ಯಂತ ನಡೆಯಲಿರುವ 67ನೇ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀ ಮಹಾಬಲ ಮಾರ್ಲರವರು ಬೆಳಿಗ್ಗೆ 10.00 ಗಂಟೆಗೆ ದೀಪ ಬೆಳಗಿಸಿ ಉದ್ಘಾಟಿಸಲಿರುವರು.

(file photo)
(file photo)

 

ಸಂಜೆ 7.00 ಗಂಟೆಗೆ ಸಮಿತಿಯ ವತಿಯಿಂದ ನಡೆದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.45ಕ್ಕೆ ಮೂಡ ಗಣಪತಿ ಪೂಜೆ ಹಾಗೂ ರಂಗಪೂಜೆ ನಡೆಯಲಿದೆ. ದಿನಾಂಕ 30 ರಂದು ಹಿರೇಮಗಳೂರು ಕಣ್ಣನ್ ಸಾರಥ್ಯದಲ್ಲಿ ಚಿಂತಕರ ಚಾವಡಿ, ತಾ.31ರಂದು ಯಕ್ಷಗಾನ ಜೋಡಾಟ, ತಾ ಸೆ.1ರಂದು ಸಭಾ ಕಾರ್ಯಕ್ರಮ ನಡೆಯಲಿದೆ. ಸೆ.2ರಂದು ಗಣೇಶನ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *