ಮಂಗಳೂರು: ಮಂಗಳೂರಿನ ಬೆಂದೂರ್ ವೆಲ್ ಎಂಬಲ್ಲಿ ಬೆಳಗ್ಗಿನ ಜಾವ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಪ್ರಯಾಣಿಸಿದ ಯಮದೂತ ಬಸ್ನ ರುದ್ರ ನರ್ತನಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ.

ಪಾಣೆಮಂಗಳೂರು ನಿವಾಸಿ ಈಶ್ವರ್ ನಾಯಕ್ ಎಂಬವರ ಪುತ್ರ ತಿಲಕ್ ರಾಜ್(20) ಪ್ರಾಣ ಕಳೆದುಕೊಂಡವರು.
ಕೊಣಾಜೆಯಿಂದ ಸ್ಟೇಟ್ ಬ್ಯಾಂಕ್ಗೆ ಬರುವ 51 ನಂಬ್ರದ `ಮಂಜನಾಡಿ ಎಂಬ ಹೆಸರಿನ ಸಿಟಿಬಸ್ ಬೆಂದೂರ್ ವೆಲ್ ಸರ್ಕಲ್ ಗೆ ಬರುವ ಸಂದರ್ಭ ತನ್ನ ನಿಯತ್ರಣ ಕಳೆದುಕೊಂಡು ಬಸ್ ನಿಲ್ದಾಣದತ್ತ ಹಠಾತ್ ನುಗ್ಗದ ಪರಿಣಾಮ ಒಬ್ಬಾತ ಚಕ್ರದಡಿಗೆ ಮುಗ್ಗರಿಸಿ ತಿಲಕ್ರಾಜ್ ಪ್ರಾಣ ಕಳೆದುಕೊಂಡರೆ, ಪ್ರದೀಪ್ ಗಾಯಗೊಂಡಿದ್ದಾರೆ. ಇವರಿಬ್ಬರು ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಘಟನೆಗೆ ಚಾಲಕನ ಅತಿವೇಗದ ಪ್ರಯಾಣವೇ ಕಾರಣ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸಿಟಿಬಸ್ಗಳ ಅಬ್ಬರ ಜೋರಾಗಿದ್ದು ಪ್ರಯಾಣಿಕರ ಪಾಲಿಗೆ ಯಮನಾಗಿ ಕಾಡುತ್ತಿದೆ. ಕದ್ರಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

