ಬಂಟ್ವಾಳ: ಸೌತ್ ಕೆನರಾ ಪೋಟೋ ಗ್ರಾಫರ್ ಅಸೋಸಿಯೇಶನ್, ಛಾಯಕ್ಷೇಮ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ನಮ್ಮಿಂದ, ನಮಗಾಗಿ, ನಮಗೋಸ್ಕರ ಎನ್ನುವ ಧ್ಯೇಯದೊಂದಿಗೆ ಬಂಟ್ವಾಳ ವಲಯ ಛಾಯಾಚಿತ್ರ ಗ್ರಾಹಕರಿಗೆ ಛಾಯಕ್ಷೇಮ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಮಾವಂತೂರು ಮಹಾಗಣಪತಿ ದೇವಸ್ಥಾನದ ಆಡಳಿತ ಮೋಕ್ತೇಸರ ಪದ್ಮ ರಾಜ ಬಲ್ಲಾಳ ಛಾಯಕ್ಷೇಮ ನಿಧಿಗೆ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಂಟ್ವಾಳ ವಲಯ ಛಾಯಗ್ರಾಹಕರ ಸಂಘ ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳಲು ಛಾಯಕ್ಷೇಮ ನಿಧಿಯಂತಹ ಅನೇಕ ಯೋಜನೆ ಗಳನ್ನು ಕಾರ್ಯರೂಪಕ್ಕೆ ತರಬೇಕು
ಎಂದರು.
ಸಂಘಟನೆಯ ಮೂಲಕ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಿ, ಸರಕಾರದ ಸವಲತ್ತುಗಳ ಜತೆಯಲ್ಲಿ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ಸವಲತ್ತುಗಳನ್ನು ಪಡೆಯಲು ಶಕ್ತರಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾವಂತೂರು ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ವಲಯ ಅಧ್ಯಕ್ಷ ಹರೀಶ್ ಮಾಣಿ, ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ,
ಗೌರಾವಧ್ಯಕ್ಷ ಸುಕುಮಾರ್, ಕಾರ್ಯದರ್ಶಿ ರೋಶನ್ ಕಲ್ಲಡ್ಕ, ಖಜಾಂಚಿ ಬಾಲಕೃಷ್ಣ ಬಿ.ಸಿ.ರೋಡು, ಉಪಾಧ್ಯಕ್ಷರಾದ ಹರೀಶ್ ಕುಂದರ್, ರವಿ ಕಲ್ಪನೆ, ರಾಜರತ್ನ, ಮಾಜಿ ಅಧ್ಯಕ್ಷರಾದ ಹರೀಶ್ ರಾವ್ ಬಂಟ್ವಾಳ, ಸತೀಶ್ ಕುಮಾರ್, ಛಾಯಕ್ಷೇಮ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಅನಂದ.ಎನ್, ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ಕುಮಾರ ಸ್ವಾಮಿ ಕನ್ಯಾನ, ಉಪಾಧ್ಯಕ್ಷರಾದ ಕಿಶೋರ್ ಪ್ರೀತಿ ಸ್ಟುಡಿಯೋ, ರವಿಕುಮಾರ್ ಕಲ್ಪನೆ ಮತ್ತಿತರರಿದ್ದರು.

