ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಜೀವವಿಮಾ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ಬಳಗ ಇದರ ವತಿಯಿಂದ ಜೂ. 10ರಂದು ಬೆಳಗ್ಗೆ ಬಿ.ಸಿ.ರೋಡಿನ ಹೋಟೆಲ್ ಕೃಷ್ಣಿಮಾ ಕಿರು ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ತರಬೇತಿ, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬಳಿಕ ಮಧ್ಯಾಹ್ನ 2ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಲ್ಲೈಸಿ ಹಿರಿಯ ಪ್ರತಿನಿಧಿ ವಾಸು ಸಪಲ್ಯ ವಗ್ಗ, ಉಡುಪಿ ವಿಭಾಗ ಮಾರುಕಟ್ಟೆ ಮೆನೇಜರ್ ವೆಂಕಟ್ರಮಣ ಶೀರೂರು, ದಾವಣಗೆರೆ ಮುಖ್ಯ ಶಾಖಾಧಿಕಾರಿ ಬಾಲಕೃಷ್ಣ, ಬಂಟ್ವಾಳ ಉಪ ಶಾಖಾಧಿಕಾರಿ ಮಧುಸೂದನ್, ತರಬೇತುದಾರ ಜಯಾನಂದ ಪೆರಾಜೆ ಮತ್ತಿತರರು ಭಾಗವಹಿಸುವರು ಎಂದು ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
