bantwala-768x576

ಬಂಟ್ವಾಳ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದ್ವೇಷ ಕಟ್ಟಿಕೊಂಡಿದ್ದ ಮಾವ ಕುಡಿತದ ಮತ್ತಿನಲ್ಲಿ ಅಳಿಯನನ್ನು ಹತ್ಯೆಗೈದ ಘಟನೆ ತಾಲೂಕಿನ  ಸರಪಾಡಿ ಗ್ರಾಮದ ಕಟ್ಟದಪಡ್ಪುನಲ್ಲಿ ಶನಿವಾರ ನಡೆದಿದೆ.

ಮೃತರನ್ನು ರಮಾನಂದ ಪೂಜಾರಿ (40) ಎಂದು ಗುರುತಿಸಲಾಗಿದೆ.

ಮಾವ ಅಮ್ಮು ಪೂಜಾರಿ ಅಳಿಯ ರಮಾನಂದ ಪೂಜಾರಿಯನ್ನು ಕಡಿದು ಕೊಲೆ ಮಾಡಿದ್ದು, ಇದಕ್ಕೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪ್ರೊ. ಐಪಿಎಸ್ ಅಕ್ಷಯ್ ಎಂ. ಹಾಕೆ, ಗ್ರಾಮಾಂತರ ಠಾಣೆ ಎಸ್ಸೈ ಪ್ರಸನ್ನ ಕುಮಾರ್ ಅವರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗೆ ಆರೋಪಿ ಅಮ್ಮನ್ ಪೂಜಾರಿಯನ್ನು ಬಂಧಿಸಿದ್ದಾರೆ.

 

 

By suddi9

Leave a Reply

Your email address will not be published. Required fields are marked *