ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ಒಕ್ಕೂಟದ ವತಿಯಿಂದ ನರಹರಿ ಸದಾಶಿವ ದೇವಸ್ಥಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಆತ್ಮರಂಜನ್ ರೈ ,ಆಡಳಿತ ಮಂಡಳಿ ಸದ್ಯಸ್ಯರಾದ ಸುಂದರ ಬಂಗೇರ, ಪ್ರದಾನ ಅರ್ಚಕರಾದ ಪರಮೇಶ್ವರ ಮಯ್ಯ,ಕಚೇರಿ ವ್ಯವಸ್ಥಾಪಕ ರಾದ ಆನಂದ ಪೂಜಾರಿ,ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆರಾದ ತುಳಿಸಿ, ಕಲ್ಲಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಗಣೇಶ್ ನಾಯ್ಕ,ಮತ್ತು ಸಂಘದ ಸದಸ್ಯರು ಉಪಸ್ಥಿರಿದ್ದರು.

