ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘದ ಆಟಿದ ಗಮ್ಮತ್ ಕಾರ್ಯಕ್ರಮ ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ನಡೆಯಿತು.ಈ ಸಂದರ್ಭ ಆಟಿ ತಿಂಗಳ ಆಚರಣೆ , ವಿಶೇಷತೆ ಮತ್ತು ಮಹತ್ವಗಳ ಬಗ್ಗೆ ಜಾನಪದ ಸಂಶೋಧಕರಾದ ಡಾ . ಕಿಶೋರ್ ರೈ ಶೇಣಿ ಯವರು ಮಾಹಿತಿ ನೀಡಿದರು.


ಆದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅರ್ಕುಳ ಕಂಪ ಸದಾನಂದ ಅಳ್ವ, ಸುಜೀರುಗುತ್ತು ಚಂದ್ರಶೇಖರ ಗಾಂಭೀರ , ಹರಿಣಾಕ್ಷಿ ಆರ್. ಶೆಟ್ಟಿ ಕೊಳಂಬೆ, ಸಾರ್ಥವುಗುತ್ತು ಜಗನ್ನಾಥ್ ರೈ , ಫರಂಗಿಪೇಟೆ ವಲಯ ಬಂಟರ ಸಂಘದ ಯೋಜನೆಗಳಿಗೆ ಸಹಕಾರ ನೀಡಿ ಒಂದು ಮನೆ ನಿರ್ಮಿಸಿಕೊಟ್ಟ ಇಂಟರ್ ನ್ಯಾಷನಲ್  ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ, ಗುತ್ತಿಗೆದಾರ ಸುಕೇಶ್ ಶೆಟ್ಟಿ ತೇವು ಇವರನ್ನು ಗೌರವಿಸಲಾಯಿತು.


ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕನೆರವನ್ನು ವಿತರಿಸಲಾಯಿತು , ರಾಜ್ಯ ಮಟ್ಟದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ  ಪಡೆದ  ಫರಂಗಿಪೇಟೆ ವಲಯ ಬಂಟರ ಸಂಘದ ಮಹಿಳಾ ತಂಡವನ್ನು ಅಭಿನಂದಿಸಲಾಯಿತು.


ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಸುಂದರ ಶೆಟ್ಟಿ ಕಲ್ಲತಡಮೆ , ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಕೊಡ್ಮಣ್ , ಉಪಾಧ್ಯಕ್ಷರಾದ ಕೊಟ್ಟಿಂಜಗುತ್ತು ವಿಶ್ವನಾಥ ಶೆಟ್ಟಿ ,ಕಾರ್ಯದರ್ಶಿ ಎ.ಕೆ ಗಿರೀಶ್ ಶೆಟ್ಟಿ ಕುಂಪಣಮಜಲು , ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರು ಗುತ್ತು ,  ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ್ ಚೌಟ  ಬದಿಗುಡ್ಡೆ , ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ,ಇಂಟರ್ ನ್ಯಾಷನಲ್  ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ )ಕಾರ್ಯದರ್ಶಿ ಪ್ರಸಾದ್ ರಾಯ್ ಕಲ್ಲಿಮಾರ್ ,ತಾಲೂಕು ಬಂಟರ ಸಂಘದ ಮಹಿಳಾವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ , ಫರಂಗಿಪೇಟೆ ವಲಯ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಎಂ. ಶೆಟ್ಟಿ ಕಲ್ಲತಡಮೆ ಕಾರ್ಯದರ್ಶಿ ಸರೋಜಿನಿ ಆಳ್ವ , ಮತ್ತಿತರರು ಉಪಸ್ಥಿತರಿದ್ದರು


ಬಂಟ ಸಮಾಜದ  ಸದಸ್ಯರು ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ವಿತರಿಸಿದರು. ಬೇಬಿ ಆರ್ನಿಕಾ ಶೆಟ್ಟಿ , ಮಾಸ್ಟರ್ ಆರ್ಯನ್  ಶೆಟ್ಟಿ ಯವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು ಭುವನೇಶ್ವರಿ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು 

By Suddi9

Leave a Reply

Your email address will not be published. Required fields are marked *