ಬಂಟ್ವಾಳ: ಶಾಂತಿ ಪ್ರಿಯ ಕ್ರೈಸ್ತ ಸಮುದಾಯದ ವಿರುದ್ಧ ವಿವಾದಾತ್ಮಕ ಸುಳ್ಳು ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ ವಿರುದ್ಧ ಎಚ್ಚರಿಕೆ ನೀಡಿದ ಯುವ ವಕೀಲ ಎ.ಪಿ.ಮೊಂತೆರೋ  ವಿಟ್ಲ  ಜಗತ್ತೇ ಕೋವಿಡ್ನಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಮಾನವರೆಲ್ಲರೂ ಭೇದಭಾವ ಬಿಟ್ಟು ಈ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡುತ್ತಿರುವಾಗ ಉಡುಪಿಯ ಸಂಸದೆಯಾದ ಶೋಭಾ ಕರಂದ್ಲಾಜೆಯವರು ಚರ್ಚ್ ಗಳಲ್ಲಿ ಕೋವಿಡ್ ಲಸಿಕೆ ಪಡೆಯಬಾರದೆಂದು ಪ್ರಚಾರ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಸುಳ್ಳು ಹೇಳಿಕೆಯನ್ನು ನೀಡಿದ ಸಂಸದೆಯ ವಿರುದ್ಧ ಎಚ್ಚರಿಕೆ ನೀಡಿದ ಯುವ ವಕೀಲರು, ಕ್ರೈಸ್ತ ಮುಖಂಡರಾದ ಎ.ಪಿ.ಮೊಂತೆರೋ ವಿಟ್ಲ.48adcc7f-ed67-418c-8147-333c8af90d9b

ಪಕ್ಷದಲ್ಲಿ ಈಗಾಗಲೇ ಮೂಲೆಗುಂಪು ಆಗಿರುವ ಸಂಸದೆಯು, ಮುಖ್ಯ ಮಂತ್ರಿಗಳ ಬದಲಾವಣೆಯ ಬಗ್ಗೆ ಚರ್ಚೆಯ ಸಮಯದಲ್ಲಿ, ಮುಖ್ಯಮಂತ್ರಿ ಬದಲಾವಣೆ ಆದರೆ ತನ್ನ ರಾಜಕೀಯ ಭವಿಷ್ಯ ಕ್ಕೆ ಕುತ್ತು ಬೀಳಬಹುದು ಎಂದು ಭ್ರಮನಿರಸನಗೊಂಡು, ತಾನು ಪ್ರಚಾರದಲ್ಲಿ ಇರಬೇಕೆಂಬ ಏಕೈಕ ಉದ್ದೇಶದಿಂದ ಶಾಂತಿಪ್ರಿಯ ಕ್ರೈಸ್ತ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಸಮಾಜದಲ್ಲಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ.

ಈಗಾಗಲೇ ಇವರ ಲೋಕಸಭಾ ಕ್ಷೇತ್ರದಲ್ಲಿ ಜನರಿಗೆ ಮನರಂಜನೆ ವಸ್ತುವಾಗಿ ಮಾರ್ಪಾಡಾಗಿದ್ದಾರೆ. ತನ್ನ ಲೋಕಸಭಾ ಕ್ಷೇತ್ರದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಯಾವುದೇ ಅಭಿವೃದ್ಧಿ ಮಾಡದಿರುವುದರಿಂದ ಕ್ಷೇತ್ರದ ಜನರು ರೋಸಿ ಹೋಗಿದ್ದಾರೆ. ಆದ್ದರಿಂದ ಜನರ ದಿಕ್ಕನ್ನು ತಪ್ಪಿಸಲು ಬಾಯಿಗೆ ಬಂದಂತೆ ಹೇಳಿಕೆ ನೀಡಿ ಸಮಾಜದ ಸಾಮರಸ್ಯವನ್ನು ಕೆಡವಿ,ತಾನು ಪ್ರಚಾರದಲ್ಲಿ ಇರಬೇಕೆಂಬ ಬಯಕೆಯಿಂದ ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇನ್ನು ಮುಂದೆ ಕ್ರೈಸ್ತ ಸಮುದಾಯದ ವಿರುದ್ಧ ಈ ರೀತಿ ಸುಳ್ಳು ಆರೋಪಗಳನ್ನು ಮಾಡಿದರೆ ಕಾನೂನಾತ್ಮಕವಾಗಿ ಹಾಗೂ ಬೀದಿಗಳಿದು ಇವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ

By Suddi9

One thought on “ಶಾಂತಿ ಪ್ರಿಯ ಕ್ರೈಸ್ತ ಸಮುದಾಯದ ವಿರುದ್ಧ ವಿವಾದಾತ್ಮಕ ಸುಳ್ಳು ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ ವಿರುದ್ಧ ಎಚ್ಚರಿಕೆ ನೀಡಿದ ಯುವ ವಕೀಲ ಎ.ಪಿ.ಮೊಂತೆರೋ”

Leave a Reply

Your email address will not be published. Required fields are marked *