ಬಂಟ್ವಾಳ : ಭಾನುವಾರ ಬಂಟ್ವಾಳ ಕಸ್ಬದ “ಪುರಸಭಾ ಮಿಲನ – 2019” ಕಾರ್ಯಕ್ರಮವು ಹೋಟೆಲ್ ಪ್ರೀತೇಶ್ಸ ಭಾಂಗಣದಲ್ಲಿ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಗಾಟಿಸಿ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಯಂತೆ ಧೈರ್ಯದಿಂದ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಒತ್ತು ನಿಡುವಂತೆ ಕರೆ ನೀಡಿದರು. ವಿರೋದ ಪಕ್ಷದವರ ಅಪ ಪ್ರಚಾರಕ್ಕೆ ಹಾಗೂ ಸುಳ್ಳು ಬರವಸೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಮಖಾಂತರ ಒಗ್ಗಟಿನಿಂದ ಹೊರಾಡೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ಅ ಧ್ಯಕ್ಷತೆ ವಹಿಸಿ ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್‍ರಚಿಸಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರಿಂದ ಸಲಹೆ ಸೂಚನೆಯನ್ನು ಪಡೆದು ಕಾರ್ಯರೂಪಿಸುವುದಾಗಿ ತಿಳಿಸಿದರು. ವಿಧಾನಸಭೆ ಹಾಗೂ ಲೋಕಸಭಾ ಮತ್ತು ಪುರಸಭಾ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ಪರಾಮವರ್ಶಿಸಿದರು. ಕಾರ್ಯಕರ್ತರ ಕಷ್ಟ ಸುಃಖವನ್ನು ಅರಿತುಕೊಂಡು ಪಕ್ಷವನ್ನು ಸಂಘಟಿಸುವುದಾಗಿ ತಿಳಿಸಿದರು.
ಬಂಟ್ವಾಳ ಕಸ್ಬ ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ರಾಜೇಶ್ ಎಲ್ ರೋಡ್ರಿಗಸ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ದಯಾನಂದ ನೇರಂಬೋಳ್ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಬೂತ್ ಸಮಿತಿಯನ್ನು ಪುನರ್‍ರಚಿಸಲಾಯಿತು. ಬಂಟ್ವಾಳ ಕಸ್ಬ ವಲಯ ಯುವಕಾಂಗ್ರೆಸ್ ಅಧ್ಯಕ್ಷರನ್ನಾಗಿ ಚೇತನ್ವಾ ಸು ಪೂಜಾರಿ ಹಾಗೂ ಮಹಿಳಾಕಾಂಗ್ರೆಸ್ ಅಧ್ಯಕ್ಷರನ್ನಾಗಿ ಅಶ್ವಿನಿ ಮೊಹನ್ ಗೌಡ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಕಳೆದ ಪುರಸಭಾ ಚುನಾವಣೆಯಲ್ಲಿ ಜಯಭೇರಿಯಾದ ವಾಸು ಪೂಜಾರಿ ಲೊರಟ್ಟೊ, ಜನಾರ್ಧನ ಚೆಂಡ್ತಿಮಾರ್, ಗಂಗಾಧರ ಪೂಜಾರಿ ಹಾಗೂ ಮೂಡನಡುಗೋಡು ಗ್ರಾಮ ಪಂಚಾಂಯತ್ ಉ ಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಸುರೇಶ್ ಪೂಜಾರಿ ಜೋರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ನೇಮಕಗೊಂಡ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಇವರಿಗೆ ಶ್ರೀ ಬಿ ರಮಾನಾಥ ರೈ ಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ಅ ಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ಸ ದಸ್ಯರಾದ ಚಂದ್ರಪ್ರಕಾಶ್ ಶೆಟ್ವಿ ತುಂಬೆ, ಪದ್ಮಶೇಖರ್ ಜೈನ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಪಿಯುಸ್ ಎಲ್ ರೊಡ್ರಿಗಸ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಮುಖಂಡರಾದ ಮೋಹನ್ ಗೌಡ ಕಲ್ಮಂಜ, ಎಪ್ರೀಯಂ ಸಿಕ್ವೇರ, ಪ್ರಶಾಂತ್ ಕುಲಾಲ್, ಜಗದೀಶ್ ಕುಂದರ್, ಮನೋಹರ ನೇರಂಬೋಳ್, ರಿಯಾಜ್ ಬಂಟ್ವಾಳ, ವೆಂಕಪ್ಪ ಪೂಜಾರಿ ಹಾಗೂ ಪಕ್ಷದ ಮುಖಂಡರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ವಂದನಾರ್ಪಣೆಗೈದರು.


