ಫರಂಗಿಪೇಟೆ ಶ್ರದ್ದಾ ಕೇಂದ್ರಗಳು , ಮಂದಿರಗಳು ಅಭಿವೃದ್ಧಿ ಹೊಂದುತ್ತಿರುವುದು ಪ್ರಗತಿಯ ಸಂಕೇತ ವ್ಯಾಯಾಮ ಶಾಲೆಯ ಮೂಲಕ ಪೂಜೆ ಗೊಳ್ಳುತಿದ್ದ ಶ್ರೀ ವೀರಾಂಜನೇಯ ಸ್ವಾಮಿ ಆಂಜನೇಯ ದೇವಸ್ಥಾನ ವಾಗಿ ಅಭಿವೃದ್ಧಿ ಹೊಂದುತ್ತಿದ್ದು ಪರಿಸರದ ಹತ್ತಾರು ಗ್ರಾಮ ಗಳಿಗೆ ಕಾರಣಿಕ ಕ್ಷೇತ್ರ ವಾಗಿ ಬೆಳೆದು ಕೊಂಡು ಬಂದಿದೆ ಎಂದು ತಾರಾನಾಥ ಕೊಟ್ಟಾರಿಯವರು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಫರಂಗಿಪೇಟೆಯಲ್ಲಿ ನೂತನ ಭವ್ಯ ದೇಗುಲ ನಿರ್ಮಿಸುವ ಸಲುವಾಗಿ ಓಂ ಶ್ರೀ ಆಂಜನೇಯ ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ರಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಓಂ ಶ್ರೀ ಆಂಜನೇಯ ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ಯಲ್ಲಿ ಗೌರವ ಅಧ್ಯಕ್ಷರಾಗಿ ಐತಪ್ಪ ಆಳ್ವ ಸುಜೀರು ಗುತ್ತು , ಅಧ್ಯಕ್ಷರಾಗಿ ಅಜಿತ್ ಚೌಟ ದೇವಸ್ಯ , ಕಾರ್ಯಾಧ್ಯಕ್ಷರಾಗಿ ಮಹಾಬಲ ಕೊಟ್ಟಾರಿ ಮುನ್ನೂರು , ಕಾಂತಪ್ಪ ಶೆಟ್ಟಿ ಕೊಡಮಣ್ಣು ,ಪ್ರದಾನ ಕಾರ್ಯದರ್ಶಿಯಾಗಿ ಉಮೇಶ್ ಶೆಟ್ಟಿ ಬರ್ಕೆ , ಕೋಶಾಧಿಕಾರಿ ಜಯರಾಮ್ ಕೊಟ್ಟಾರಿ ಅರ್ಕುಳ , ಪ್ರದಾನ ಸಂಚಾಲಕರಾಗಿ ವಿಠ್ಠಲ್ ಆಳ್ವ ಗರೋಡಿ , ಆಯ್ಕೆಯಾದರು
ವೇದಿಕೆಯಲ್ಲಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು, ಕ್ಷೇತ್ರದ ಅರ್ಚಕರಾದ ಮುರಳಿ ಭಟ್ ಕಲ್ಲ ತಡಮೆ , ವ್ಯಾಯಾಮ ಶಿಕ್ಷಕರಾದ ಪ್ರಭಾಕರ ಮಾಸ್ಟರ್ ,ಮಹಾಬಲ ಕೊಟ್ಟಾರಿ ಮುನ್ನೂರು , ಪ್ರಕಾಶ್ ಚಂದ್ರ ರೈ ದೇವಸ್ಯ , ದಾಮೋದರ ಶೆಣೈ ಅರ್ಕುಳ , ಬಾಲಕೃಷ ಶೆಟ್ಟಿ ದೇವಸ್ಥಾನ ಬೆಟ್ಟು , ಸುಂದರ ಶೆಟ್ಟಿ ಕಲ್ಲ ತಡಮೆ, ರಾಮದಾಸ್ ಕೋಟ್ಯಾನ್ ಮಜಿ , ಉಮೇಶ್ ಶೆಟ್ಟಿ ಬರ್ಕೆ , ಸದಾನಂದ ಆಳ್ವ ಕಂಪ , ಶಶಿರಾಜ್ ಶೆಟ್ಟಿ ಕೊಳಂಬೆ , ಉದಯ ಕುಮಾರ್ ಶೆಟ್ಟಿ ದೇವಸ್ಯ , ಗೋವಿಂದ ಶೆಣೈ ಅರ್ಕುಳ , ರಾಧಾಕೃಷ್ಣ ತಂತ್ರಿ ಪೊಳಲಿ , ಕಾಂತಪ್ಪ ಶೆಟ್ಟಿ ಕೊಡಮಣ್ಣು ಉಪಸ್ಥಿತರಿದ್ದರು
ಕರುಣಾಕರ ಕೊಟ್ಟಾರಿ ಸ್ವಾಗತಿಸಿದರು , ದಿನಕರ ಕರ್ಕೇರ ಮಂಟಮೆ ಪ್ರಸ್ತಾವನೆ ಗೈದರು , ಸುಕೇಶ್ ಶೆಟ್ಟಿ ತೇವು ವಂದಿಸಿದರು

