ಬಂಟ್ವಾಳ: ಆಧುನಿಕ ಜಗತ್ತು ಸ್ಪರ್ಧಾತ್ಮಕ. ಇಂದು ಪ್ರತಿಯೊಬ್ಬರೂ ತನ್ನ ಬದುಕನ್ನು ಸ್ಪರ್ಧೆಗೊಡ್ಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ವಾಮಂಜೂರಿನ ಸಂತ ಜೋಸೆಪ್ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವಿನ್ಸೆಂಟ್ ಕ್ರಾಸ್ತಾ ಹೇಳಿದ್ದಾರೆ. ಅವರು ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ಸ್ಟಾರ್ ಕಾಲೇಜು ಸ್ಕೀಮ್ ಪ್ರಾಯೋಜಕತ್ವದಲ್ಲಿ ನಡೆದ ಅಂತರ್ ಕಾಲೇಜು ವಿಜ್ಞಾನ ಸಂಬಂಧಿ ವಿವಿಧ ಸ್ಪರ್ಧೆಗಳು ‘ಸೈನ್ಸ್ ವಿಸ್ತಾ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

16 btl svs
ವಿದ್ಯಾರ್ಥಿ ಜೀವನದಲ್ಲೂ ಸ್ಪರ್ಧೆಯನ್ನು ಎದುರಿಸಬೇಕು. ಪಠ್ಯದಷ್ಟೇ ಮಹತ್ವನ್ನು ಪಠ್ಯೇತರ ಚಟುವಟಿಕೆಗೂ ಗಮನವನ್ನು  ವಿದ್ಯಾರ್ಥಿ ನೀಡಬೇಕು. ಆಗ ಮಾತ್ರ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ಸ್ಟಾರ್ ಕಾಲೇಜು ಸ್ಕೀಮ್‌ನ ಮಾನ್ಯತೆಯು ವಿಜ್ಞಾನ ವಿಭಾಗಗಳ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಮತ್ತು ಐಕ್ಯೂಎಸಿ ಸಂಯೋಜಕಿ ಡಾ. ಎಚ್.ಆರ್. ಸುಜಾತಾ ಪ್ರಾಸ್ತಾವಿಸಿದರು. ಕಾಲೇಜಿನ ಸ್ಟಾರ್ ಕಾಲೇಜು ಸ್ಕೀಮ್‌ನ ಸಂಯೋಜಕಿ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.ಮಾನಸ ಪ್ರಾರ್ಥಿಸಿದರು.

By Suddi9

Leave a Reply

Your email address will not be published. Required fields are marked *