-ಬಂಟ್ವಾಳ:ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವಚ್ಚ ಪರಿಸರ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್ ಜೊತೆಗೆ ಊರಿನ ಜನರ ಸಹಕಾರ ಕೂಡ ಅಗತ್ಯವಿದೆ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದ್ದಾರೆಗೋಳ್ತಮಜಲು ಗ್ರಾ.ಪಂ.ಸಭಾಂಗಣದಲ್ಲಿ ಸ್ವಚ್ಚ ಭಾರತ ಮಿಷನ್ ಜಿಲ್ಲಾ ನೆರವು ಘಟಕ ದ.ಕ.ಜಿಪಂ.,ತಾಪಂ ಬಂಟ್ವಾಳ, ಹಾಗೂ ಗೋಳ್ತಮಜಲು ಗ್ರಾಪಂ.ಸಹಯೋಗದೊಂದಿಗೆ ನಡೆದಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಅಂಗಡಿ ಮಾಲಕರ ಜೊತೆಗಿನ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಭಟ್ ಮಾತನಾಡಿ, ಘನ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಗ್ರಾಪಂ.ನಿಂದ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕೆ ಕಲ್ಲಡ್ಕ ಪೇಟೆಯ ಅಂಗಡಿ ಮಾಲಕರ ಸಹಕಾರವನ್ನು ಯಾಚಿಸಿದರಲ್ಲದೆ ಕಲ್ಲಡ್ಕ ಪೇಟೆಯಲ್ಲಿ ಕಸ ಎಸೆಯುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅತಿಥಿಯಾಗಿದ್ದ ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಅವರು,ಒಣಕಸ ಸಂಗ್ರಹ ಚೀಲ ಮತ್ತು ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಂಕೇತಿಕವಾಗಿ ವಿತರಿಸಿದರು. ಜಿಲ್ಲಾ ನೆರವು ಘಟಕದ ಮಂಜುಳಾ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ಮುಸ್ತಾಫ ಕೆ.ಎಸ್.,ಸದಸ್ಯರು ಉಪಸ್ಥಿತರಿದ್ದರು.ಪಿಡಿಒ ಶಿವಾನಂದ ಪೂಜಾರಿ ಪ್ರಸ್ತಾವಿಸಿ, ಸ್ವಾಗತಿಸಿದರು.ಗ್ರಾಪಂ ಸದಸ್ಯ ರಾಜೇಶ್ ಕೊಟ್ಟಾರಿ ವಂದಿಸಿ,ನಿರೂಪಿಸಿದರು.