ಬಂಟ್ವಾಳ : ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಸರಕಾರಿ ಫ್ರೌಢಶಾಲೆ ಕೊಯಿಲದಲ್ಲಿ ಜರಗಿದ ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಗೂ ತಾ.ಕಾ.ಸೇ.ಸಮಿತಿ ಅಧ್ಯಕ್ಷ ಮಹಮ್ಮದ್ ಇಮ್ತಿಯಾಝ್ ಅಹಮ್ಮದ್ ಉದ್ಘಾಟಿಸಿದರು.
ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್, ಸಹಾಯಕ ಸರಕಾರಿ ಅಭಿಯೋಕ ಎಂ.ಎಸ್.ಆಲಿ, ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮಾಣಿಬೆಟ್ಟು , ನ್ಯಾಯವಾದಿಗಳಾದ ಅಶ್ವನಿ ಕುಮಾರ್ ರೈ, ಎ.ಕೆ.ರಾವ್, ಸತೀಶ್ ಬಿ., ಆಶಾಮಣಿ , ಗಿರೀಶ್ ಮುಳಿಯ, ಪಂ.ಸದಸ್ಯೆ ಯಶೋಧ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪರಮೇಶ್ವರ, ವಸಂತ್ ಕುಮಾರ್ ಅಣ್ಣಲಿಕೆ, ಗಿರೀಶ್ ಶೆಟ್ಟಿ, ಮಂಜಪ್ಪ , ಪ್ರಭಾರ ಮುಖ್ಯೋಪಾಧ್ಯಾಯ ಸುಧೀರ್, ಶಿಕ್ಷಕರಾದ ರಮೇಶ್ ಮಯ್ಯ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.


