ಮೂಡುಬಿದಿರೆ: ಜೈನ್ ಮಿಲನ್, ಯುವ ಜೈನ್ ಮಿಲನ್, ಸರ್ವಮಂಗಳ ಮಹಿಳಾ ಸಂಘ ಹಾಗೂ ಮಡಪಾಡಿ ಗೈಸ್ ಇವರ ಸಹಯೋಗದಲ್ಲಿ ಅ.7ರಂದು 18 ಬಸದಿಗಳ ಪೈಕಿ ಚೋಳ ಶೆಟ್ರ ಬಸದಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ಮೂಡಬಿದ್ರೆ ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಾಮೀಜಿಗಳು, ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಹಾಗೂ ಸರ್ವ ಮಂಗಳದ ಅಧ್ಯಕ್ಷೆ ಸುಧಾ ಪೃಥ್ವಿರಾಜ್ ಹಾಗೂ ಸದಸ್ಯರನ್ನು ಅಭಿನಂದಿಸಿ ಆಶೀರ್ವದಿಸಿದರು.

