ಬಂಟ್ವಾಳ: ದೇಶದಲ್ಲಿ ರಾಸಾಯನಿಕ ಮಿಶ್ರಣರಹಿತ ಮತ್ತು ಪ್ರಕೃತಿದತ್ತವಾಗಿ ಸಿಗುವ ಆರೋಗ್ಯವರ್ಧಕ ಹಲಸಿನ ಹಣ್ಣು ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಂಡು ವಿವಿಧ ಖಾದ್ಯ ತಯಾರಿಕೆಗೆ ಬಳಸಿಕೊಳ್ಳಲು ಸಹಕಾರಿ ತೆಂಗು ಪಾರ್ಕಿನಂತೆ ಹಲಸು ಪಾರ್ಕ್ ಆರಂಭಿಸುವ ಅವಶ್ಯಕತೆ ಇದೆ. ಆ ಮೂಲಕ ಕೃಷಿಕರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಯುವಜನರ ನಿರುದ್ಯೋಗ ನಿವಾರಣೆಗೆ ಉದ್ಯಮವಾಗಿ ರೂಪುಗೊಳ್ಳಬೇಕು ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.

KAR_2897
ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ಪುತ್ತೂರು ನವಚೇತನ ಸ್ನೇಹ ಸಂಗಮ ಮತ್ತು ಬಂಟ್ವಾಳ ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ಎರಡು ದಿನಗಳ ಅಕಾಲ ಹಲಸು ಸಂಗಮ-2018 ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಋಷಿ ಸಂಸ್ಕೃತಿಯಿಂದ ಬಂದ ಕೃಷಿ ಸಂಸ್ಕೃತಿ ನಾಶಗೊಂಡರೆ ದೇಶೀಯ ಸಂಸ್ಕೃತಿ ನಾಶವಾಗುತ್ತದೆ. ಇದರಿಂದಾಗಿ ನಾವೆಲ್ಲರೂ ಹಲಸಿನ ಮೌಲ್ಯವರ್ಧನೆ ಮತ್ತು ಇದನ್ನು ಉದ್ಯಮವನ್ನಾಗಿ ಪರಿವರ್ತಿಸಲು ಕೈ ಜೋಡಿಸಬೇಕು ಎಂದರು.ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲಸು ಕೇವಲ ಬಡಜನರ ಆಹಾರವಾಗಿರದೆ ಎಲ್ಲರ ಆರೋಗ್ಯ ವೃದ್ಧಿಸುವ ಪೌಷ್ಠಿಕ ಆಹಾರವಾಗಿ ಪರಿವರ್ತನೆಗೊಂಡಿದೆ ಎಂದರು.KAR_2903

ರೋಟರಿ ಕ್ಲಬ್ ಸಹಾಯಕ ಗವರ್ನರ್ ಎನ್.ಪ್ರಕಾಶ ಕಾರಂತ ಮಾತನಾಡಿ, ಪ್ರತೀ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹಲಸು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಜನತೆಗೆ ಹಲಸಿನ ವೈಶಿಷ್ಟ್ಯತೆ ಬಗ್ಗೆ ತಿಳಿಸುವ ಮಹತ್ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿ ಜಲ ತಜ್ಞ ಶ್ರೀಪಡ್ರೆ ಉಪಸ್ಥಿತರಿದ್ದರು.ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಗತಿಪರ ಕೃಷಿಕ ಕೈಯೂರು ನಾರಾಯಣ ಭಟ್ ಶುಭ ಹಾರೈಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಸಮಿತಿ ಪದಾಧಿಕಾರಿಗಳಾದ ನಾ.ಕಾರಂತ ಪೆರಾಜೆ, ಪಾಂಡುರಂಗ ಭಟ್ ಕುದಿಂಗಿಲ, ಮಹಾಬಲೇಶ್ವರ ಹೆಬ್ಬಾರ್, ಮಹೇಶ ಪುಚ್ಚಪಾಡಿ, ಮೋಹನ್ ಕೆ.ಶ್ರೀಯಾನ್ ರಾಯಿ, ಮಧುಸೂದನ ಶೆಣೈ, ಪ್ರಭಾಕರ ಪ್ರಭು, ಸುಭಾಶ್ಚಂದ್ರ ಜೈನ್, ಮತ್ತಿತರರು ಇದ್ದರು.ಸಮಿತಿ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತಿಸಿ, ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ವಂದಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ವಿಶೇಷತೆ:

ವಿವಿಧ ಬಗೆಯ ಹಲಸಿನ ಹಣ್ಣು, ವಿವಿಧ ತಳಿಯ ಹಲಸಿನ ಗಿಡಗಳು, ವಿಭಿನ್ನ ಶೈಲಿ ಮತ್ತು ರುಚಿಕರ ಖಾದ್ಯಗಳಾದ ಹಲಸಿನ ಕೇಕ್,ಹಲ್ವ, ಹಪ್ಪಳ, ಐಸ್‍ಕ್ರೀಂ, ಕಬಾಬ್, ಒಣ ಹಣ್ಣು ಸೊಳೆ, ಒಣ ಕಾಯಿ ಸೊಳೆ, ಬಿರಿಯಾನಿ ಮಿಕ್ಸ್, ಚಾಕೊಲೇಟ್, ಹಲಸಿನ ಹೋಳಿಗೆ, ಹಲಸಿನ ದೋಸೆ, ಪಲ್ಪ್, ಜ್ಯೂಸ್, ಪೋಡಿ, ರೊಟ್ಟಿ, ವರಟ್ಟಿ ಪಸನ್ ಬಾಜಿ, ಹಲಸಿನ ಬೀಜದ ಪಾಯಸ, ಜಾಮೂನು ಪ್ರದರ್ಶನ ಮತ್ತು ಮಾರಾಟ ಭರದಿಂದ ನಡೆಯಿತು. ಪ್ರತಿಷ್ಠಿತ ಸುಜಾತ ಅಡಿಕೆ ಪತ್ರಿಕೆ ಸಹಿತ ವಿವಿಧ ಕೃಷಿ ಪುಸ್ತಕ, ಜಾನಪದ ಶೈಲಿ ಗೃಹೋಪಯೋಗಿ ವಸ್ತುಗಳು, ಯಂತ್ರೋಪಕರಣ ಪ್ರದರ್ಶನ ಕೃಷಿಕರು ಮತ್ತು ಹಲಸು ಪ್ರೇಮಿಗಳ ಗಮನ ಸೆಳೆಯಿತು. ಇಲ್ಲಿನ ಬಿ.ಸಿ.ರೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪದವಿಪೂರ್ವ ಕಾಳೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಶ್ರಮಿಸಿ ಮೆಚ್ಚುಗೆ ಗಳಿಸಿದರು.

By Suddi9

Leave a Reply

Your email address will not be published. Required fields are marked *