ಬಂಟ್ವಾಳ :ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ಹಾಗೂ ರಾಜ್ಯ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಇವರ ಆಶ್ರಯದಲ್ಲಿ ‘ಕೆಸರ್ದ ಕಂಡೊಡು ಕುಸೆಲ್ಡ ಗೊಬ್ಬುಲು’ ಕಾರ್ಯಕ್ರಮ ಬಿ.ಸಿ.ರೋಡ್ ಪೊಸಳ್ಳಿ ಕೆಸರು ಗದ್ದೆಯಲ್ಲಿ ನಡೆಯಿತು. ಇದನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಕರಾವಳಿ ಕುಲಾಲ ಕುಂಬಾರ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಅಣ್ಣಯ್ಯ ಕುಲಾಲರ ಇಂತಹ ಕ್ರಿಯಾತ್ಮಕ ಯುವಕ ಯುವತಿಯರನ್ನು ತೊಡಗಿಸುವ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬೆಳೆಸಿ ಮುಂದಿನ ದಿನಗಳಲ್ಲಿ ಕುಂಬಾರರು ಪ್ರಜಾಪ್ರಭುತ್ವದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭ ಮತದಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕು.
ಆ ಮೂಲಕ ನಾಯಕತ್ವವನ್ನು ಬಾಂಧವರಲ್ಲಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ಸದಾಶಿವ ಬಂಗೇರ ಅಧ್ಯಕ್ಷರು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಇವರು ಮಾತನಾಡಿ ಇಂತಹ ಸುಂದರ ಹಾಗೂ ಮಹತ್ತರವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳವುದರ ಮೂಲಕ ಕುಲಾಲರು ಕೂಡ ಸಮಾಜದ ಮುಂಚೂಣಿಯಲ್ಲಿ ಗುರುತಿಸಬಲ್ಲರು ಎಂದು ಸಮಾಜಕ್ಕೆ ತೋರಿಸಿ ಕೊಟ್ಟಂತಾಗಿದೆ. ಆ ಮೂಲಕ ಯಾವುದೇ ಕಾರ್ಯಕ್ರಮಗಳನ್ನು ತಮ್ಮ ಸಾವಥ್ರ್ಯದ ಮೂಲಕ ಕುಲಾಲ ಜನಾಂಗ ರೂಪಿಸಬಲ್ಲುದು ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಆತಿಥಿಗಳಾಗಿ ಓಬಯ್ಯ ಮೂಲ್ಯ ರಾಷ್ಟ್ರಪತಿ ಪದಕ ಚಿಜೇತ ಜಿಲ್ಲಾ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿವೃತ್ತ ಇಲಾಖಾಧಿಕಾರಿ, ಸತೀಶ್ ಕುಲಾಲ್ ಅಧ್ಯಕ್ಷರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಮಯ್ಯರಬೈಲು ಶ್ರೀ ನಾಗೇಶ ಸಾಲಿಯಾನ್ ಮ್ಹಾಲಕರು ಸೌತಡ್ಕ ಫರ್ನಿಚರ್ಸ್ ಬಂಟ್ವಾಳ ಉಮಾಕರ್ ಬಂಗೇರ ನ್ಯಾಯವಾದಿಗಳು ಬಿ.ಸಿ.ರೋಡು ಯಶೋಧಕೃಷ್ಣಪ್ಪ ಅಧ್ಯಕ್ಷ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಇವರು ಸಮಯೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನಾರಾಯಣ ಸಿ. ಪೆರ್ನೆ ಎಲ್ಲರ ಸಹಕಾರದಿಂದ ಈ ಒಂದು ಶ್ಲಾಘನೀಯ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು.
ಇಂತಹ ಸಂಘಟನೆಗಳಲ್ಲಿ ಯುವಕರು ತೊಡಗಿಸಿ ಕೊಂಡಾಗ ಸಂಘಟನೆ ಬಲವಾಗುವುದರ ಆ ಮೂಲಕ ಯುವ ಶಕ್ತಿ ಸಬಲವಾಗುವುದು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸದಾಶಿವ ಬಂಗೇರರವರನ್ನು ಫಲಪುಷ್ಪ ತಾಂಬೂಲ, ಶಾಲು ಪೇಟ ತೊಡಿಸಿ ಅಭಿನಂದಿಸಿ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಶ್ರೀ ಉಮೇಶ ಜತೆ ಕಾರ್ಯದರ್ಶಿ ಮಾಡಿದರು. ಕು| ಪ್ರತೀಕ್ಷಾ 8ನೇ ತರಗತಿ ಜಗನ್ನಾಥ ಶೆಟ್ಟಿ ಬೊಂಡಾಲ ಸ್ಮಾರಕ ಪ್ರೌಢಶಾಲೆ ಶಂಭೂರು ವಿದ್ಯಾರ್ಥಿನಿ, ಹಾವು ಕಚ್ಚಿದ ತನ್ನ ಸಹಪಾಠಿಯನ್ನು ಬಾಯಿಯಿಂದ ವಿಷ ಹೀರಿ ಬದುಕಿಸಿ ಸುವರ್ಣ ಚ್ಯಾನಲ್ ಹಾಗೂ ಕನ್ನಡ ಪ್ರಭಾ ಪತ್ರಿಕೆಯ ವತಿಯಿಂದ ಶೌರ್ಯ ಪ್ರಶಸ್ತಿ ಪಡೆದವಳನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಂತೆಯೇ ರೈಲ್ವೆ ಸೇತುವೆಯಿಂದ ಬಿದ್ದು ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಚಂದ್ರಶೇಖರ ಮೂಲ್ಯರವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ ನೀಡಲಾಯಿತು. ಕು| ಪ್ರತೀಕ್ಷಾ ರವರ ಪರಿಚಯ ಹಾಗೂ ಸನ್ಮಾನ ಪತ್ರವನ್ನು ಭಾರತಿಶೇಷಪ್ಪ ಉಪಾಧ್ಯಕ್ಷರು ಮಹಿಳಾ ಸಂಘ ಬಂಟ್ವಾಳ ಇವರು ನಿರ್ವಹಿಸಿದರು. ಶ್ರೀ ಶೇಷಪ್ಪ ಮಾಸ್ಟರ್ ಸ್ವಾಗತಿಸಿ ಡಿ.ಎಂ. ಕುಲಾರ್ ವಂದಿಸಿದರು. ಹೆಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ಶ್ರೀ ಸುಕುಮಾರ್ ಬಂಟ್ವಾಳ, ಶ್ರೀ ಸತೀಶ್ ಜಕ್ರಿಬೆಟ್ಟು ಸಂಚಾಲಕರು, ಶ್ರೀ ಸತೀಶ್ ಸಂಪಾಜೆ ಕಾರ್ಯದರ್ಶಿ, ಶ್ರೀ ಮಾಧವ ಕುಲಾಲ್ ಕೋಶಾಧಿಕಾರಿ, ಸತೀಶ್ ಪಲ್ಲಮಜಲು, ಜಯರಾಜ್ ಎಸ್. ಬಂಗೇರ, ಜಯ ಗಣೇಶ ಉಪಾಧ್ಯಕ್ಷರು, ಡಾ| ಬಾಲಕೃಷ್ಣ, ಮಚ್ಛೇಂದ್ರ ಸಹಕರಿಸಿದ್ದರು
