ಬಂಟ್ವಾಳ : ನಾಯಿ ಬೇಟೆಗೆ ಬಂದಿದ್ದ ಚಿರತೆಯೊಂದು ಹಳ್ಳಕ್ಕೆ ಬಿದ್ದ ಘಟನೆ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಹಾರ್ದೊಟ್ಟು ಎಂಬಲ್ಲಿ ಶನಿವಾರ ಸಂಜೆ ನಡೆದಿದ್ದು,ಇದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.0508pktG1
ಇಲ್ಲಿನ ಬಾಬು ನಾೈಕ ಅವರ ಮನೆ ಸಮೀಪ ನಾಯಿಗಳು ಒಂದೇ ಸವನೆ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರಬಂದು ನೋಡಿದಾಗ ಹಳ್ಳದಲ್ಲಿ ಚಿರತೆಯೊಂದು ಬಿದ್ದಿರುವುದು ಕಂಡು ಬಂತು.ಸುದ್ದಿ ತಿಳಿದ ಸ್ಥಳೀಯರು ಅಲ್ಲಿ ಜಮಾಯಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಬಂಟ್ವಾಳ ವಲಯ ಅರಣ್ಯ ಅ„ಕಾರಿ ಮತ್ತು ಸಿಬಂದಿಗಳು ಅರಿವಳಿಕೆ ತಜ್ಞ ರಾದ ಡಾ.ವಿಕ್ರಮ್ ಮತ್ತು ದಿನೇಶ್ ಜೊತೆ ಆಗಮಿಸಿಚಿರತೆಗೆ ಅರಿವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು.ಶುಶ್ರೂಷೆ ಯನ್ನು ನೀಡಿ ಬಳಿಕ ಅಭಯಾರಣ್ಯಕ್ಕೆ ಬಿಡಲಾಯಿತು.ಉಪ ಅರಣ್ಯಾ„ಕಾರಿಗಳಾದ ಪ್ರೀತಂ,ಅನಿಲ್,ಅರಣ್ಯ ರಕ್ಷಕರಾದ ವಿನಯ್ ಕುಮಾರ್,ಜಿತೇಶ್,ಲಕ್ಷ್ಮಿ ನಾರಾಯಣ,ಸಿಬಂದಿಗಳಾದ ಭಾಸ್ಕರ,ಪ್ರವೀಣ,ಜಯರಾಮ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *