ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಶ್ರೀರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ನಿರ್ಮಿಸುವ ಬಗ್ಗೆ ಹುನ್ನಾರ ನಡೆಯುತ್ತಿದೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಾಕಷ್ಟು ವಿರೋದಗಳು ವ್ಯಕ್ತವಾಗಿದ್ದು ಈಗಾಗಲೇ ಸಂಬಂದಪಟ್ಟವರಿಗೆ ಸ್ಥಳೀಯ ಸಂಘಟನೆಗಳು ಒಟ್ಟು ಸೇರಿ ಯಾವುದೇ ಕಾರಣಕ್ಕೆ ಈ ಸ್ಥಳದಲ್ಲಿ ಯಾವುದೇ ರೀತಿಯ ಮಧ್ಯದ ವ್ಯಾಪರಕ್ಕೆ ಅನುವು ಮಾಡಿಕೊಡಬಾರದು ಎಂದು ಮನವಿಯನ್ನು ಮಾಡಿದೆ. ಈಗ ಮತ್ತೆ ಪೆರಾಜೆ ಗ್ರಾಮದ ಸರ್ವ ಜನರು ಸೇರಿಕೊಂಡು ಪ್ರತ್ಯೇಕವಾದ ವೈನ್ ಶಾಪ್ ವಿರೋದಿ ಸಮಿತಿ ಎನ್ನುವ ಸಮಿತಿಯೊಂದನ್ನು ಶ್ರೀರಾಮ ಚಂದ್ರ ಪುರ ಮಠದಲ್ಲಿ ಆದಿತ್ಯವಾರ ರಚನೆ ಮಾಡಲಾಗಿದೆ.IMG_20170709_162503626

ಈ ಸಮಿತಿಯ ಮೂಲಕ ಸ್ಥಳಿಯ ಸಂಘಟನೆಗಳು ಸೇರಿಕೊಂಡು ಮುಂದಿನ ದಿನಗಳಲ್ಲಿ ಹೋರಾಟದ ಹಾದಿಯನ್ನು ಹಿಡಿಯುವ ಸಂಕಲ್ಪವನ್ನು ಮಾಡಲಾಗಿದೆ. ಯಾವುದೇ ಕಾರಣಕ್ಕೆ ಸಭ್ಯ ಪರಿಸರದಲ್ಲಿ ವೈನ್ ಶಾಪ್ ತಲೆ ಎತ್ತಬಾರದು. ಈ ರಸ್ತೆಯ ಮೂಲಕ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಜನೆ ತೆರಳುತ್ತಾರೆ. ಜೊತೆಗೆ ಶ್ರೀರಾಮ ಚಂದ್ರಪುರ ಮಠದಲ್ಲಿ ವಿದ್ಯಾರ್ಜನೆಗಾಗಿ ಅನೇಕ ವಿದ್ಯಾರ್ಥಿಗಳು ಹೋಗುತ್ತಾರೆ,  ಈ ಜಾಗಕ್ಕೆ ತಾಗಿಕೊಂಡು ಚಾಮುಂಡೇಶ್ವರೀ ಭಜನಾ ಮಂದಿರದ ನಿರ್ಮಾಣವಾಗುತ್ತಿದೆ, ಮತ್ತು ಪೆರಾಜೆ ಗ್ರಾಮದ ಕಾರನೀಕ ಶ್ರಿಗುಡ್ಡಚಾಮುಂಡಶ್ವರೀ ದೈವದ ಗುಡಿಯು ಇದೆ ಹಾಗಾಗಿ ಗ್ರಾಮಕ್ಕೆ ಪೀಡೆಯಾಗಿ ಗೋಚರಿಸುವ ಈ ವೈನ್ ಶಾಪ್‍ನ್ನು ಇಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ ನೆಲೆಯೂರಲು ಬಿಡಬಾರದು ಎಂದು ನಿರ್ಣಯ ತೆಗದುಕೊಳ್ಳಲಾಯಿತು. ಅಲ್ಲದೆ ಪೆರಾಜೆ ಗ್ರಾಮ ಪಂಚಾಯತ್‍ನಲ್ಲಿ ಜುಲ್ಯಾ 12ರಂದು ಗ್ರಾಮ ಸಭೆ ನಡೆಯಲಿದ್ದು ಗ್ರಾಮ ಸಭೆಯಲ್ಲಿ ಎಲ್ಲಾ ಗ್ರಾಮದ ಗ್ರಾಮಸ್ಥರು ಸೇರಿಕೊಂಡು ವಿರೋಧ ವ್ಯಕ್ತಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ 250ಕ್ಕೂ ಹೆಚ್ಚು ಪುರುಷರು ಮತ್ತು ಮಹಳೆಯರು ಸೇರಿದ್ದರು.  ಸಭೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ರಾಜಾರಾಂ ಕಡೂರು, ಗೌರವಾಧ್ಯಕ್ಷ ಶ್ರೀಕಾಂತ ಆಳ್ವ, ಕಾರ್ಯದರ್ಶಿಗಳಾದ ಲಿಂಗಪ್ಪ ಮೈಂದಗುರಿ, ಅಣ್ಣಿ ಪೂಜಾರಿ , ಹೋರಾಟ ಸಮಿತಿಯ ಮಹಿಳಾ ಸಂಘದ ಅಧ್ಯಕ್ಷೆ ಭಾರತಿಜಯನಂದ ಪೆರಾಜೆ ಮತ್ತು ಪ್ರಮುಖರಾದ ಬಿ.ಟಿನಾರಾಯಣ ಭಟ್ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *