ವಿಟ್ಲ : ಈ ವರ್ಷ 1ನೇ ತರಗತಿಗೆ ದಾಖಲಾದ ಮಕ್ಕಳ ಹೆಸರಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ರಜಾ ಅವಧಿಯಲ್ಲಿ 44 ಮಕ್ಕಳು 1ನೆ ತರಗತಿಗೆ ದಾಖಲಾಗಿದ್ದು ವಿಶೇಷವಾಗಿತ್ತು. ಪ್ರಸ್ತುತ ಪ್ರಾರಂಭದ ದಿನ 18ಮಕ್ಕಳು 1ನೇ ತರಗತಿಗೆ ಸೇರ್ಪಡೆಯಾಗಿದ್ದು, 1ನೇ ತರಗತಿಗೆ ಒಟ್ಟು 62 ವಿದ್ಯಾರ್ಥಿಗಳು ದಾಖಲುಗೊಂಡಿದ್ದಾರೆ. ಇನ್ನು ಏರಿಕೆಯಾಗುವ ನಿರೀಕ್ಷೆ ಇದೆ. ಈ ವರ್ಷ ದಾಖಲೆಗೊಂಡ ವಿದ್ಯಾರ್ಥಿಗಳ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸ್ಮಾರ್ಟ್ ಬಾಲವಾಡಿ ಪ್ರಾರಂಭಗೊಂಡಿದೆ.1 (1)

By Suddi9

Leave a Reply

Your email address will not be published. Required fields are marked *