ಬಂಟ್ವಾಳ: ವಿದ್ಯಾರ್ಥಿಗಳನ್ನು ಟಿ. ವಿ. ನೋಡದಂತೆ ನಿರ್ಬಂದಿಸುವ ಬದಲು ಶೈಕ್ಷಣಿಕ ಪೂರಕ ವಿಚಾರಗಳು ಅವರಿಗೆ ಸಿಗುವಂತೆ. ಪ್ರತಿಭೆಗೆ ಪೂರಕ ವಿಚಾರಗಳು ದೊರೆಯುವಂತೆ, ಜ್ಞಾನ ಯೋಗ್ಯ ವಿಚಾರ ನೀಡುವ ಚಾನೆಲ್ ನೋಡುವಂತೆ ಮಾರ್ಗದರ್ಶನ ಮಾಡಿ ಎಂದು ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ಹೇಳಿದರು.
ಅವರು ಡಿ. 16ರಂದು ಎಸ್ವಿಎಸ್ ದೇವಳ ಕಿ.ಪ್ರಾ. ಶಾಲೆಯ ವರ್ಧಂತ್ಯುತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳ ಪ್ರತಿಭೆ ಬೆಳೆಯುವಂತಹ, ನೆನಪು ಶಕ್ತಿ ಹೆಚ್ಚಿಸುವ, ಅವರು ಕಲಿಯುವ ಕುತೂಹಲ ತಾಳುವಂತೆ ಮಾಡುವ ರೀತಿಯಲ್ಲಿ ಮೊಬೈಲ್ ಬಳಕೆಯನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.ಮಕ್ಕಳನ್ನು ಊಟಕ್ಕಾಗಿ, ಆಟಕ್ಕಾಗಿ ನಿರ್ಬಂದಿಸುವ ಬದಲು ಅವರಲ್ಲಿ ಸ್ಪರ್ಧೆಯನ್ನು ಸೃಷ್ಟಿಸಿ. ಆಕರ್ಷಣೆ ನೀಡಿರಿ, ಹೊಸದೇನೋ ಇದೆ ಎಂಬ ಭಾವನೆ ಹುಟ್ಟಿಸಿ. ಆಗ ನಿಮ್ಮ ಮಗು ಆಸಕ್ತಿಯಿಂದ ಕಲಿತುಕೊಳ್ಳಲು ಮುಂದೆ ಬರುವುದಾಗಿ ವಿವರಿಸಿದರು.
ಶಾಲಾ ಸಂಚಾಲಕ ಬಿ. ಪುರುಷೋತ್ತಮ ಶೆಣೈ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶೈಕ್ಷಣಿಕ ಪ್ರತಿಭೆ, ಕ್ರೀಡಾ ಪ್ರತಿಭೆ, ವಿವಿಧ ಚಟುವಟಿಕೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಶಿಕ್ಷಕರ ಪ್ರೋತ್ಸಾಹದಿಂದ ಮಕ್ಕಳ ಸ್ವಯಂ ಪ್ರತಿಭೆಯಿಂದ ಮುಂದೆ ಬರಲು ಹಾರೈಸಿದರು.ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಎಂ. ಸುಬ್ರಹ್ಮಣ್ಯ ಪೈ ಸ್ವಸ್ತಿವಾಚನ ಮಾಡಿ, ಈ ಶಾಲೆಯ ವಿದ್ಯಾರ್ಥಿಯಾಗಿ ನಾನು ಶಿಕ್ಷಣ ಪಡೆದು ಇಂದು ಅಬಕಾರಿ ಇಲಾಖೆಯ ಮೂಲಕ ಸೇವೆ ಸಲ್ಲಿಸುತ್ತಿದ್ದೇನೆ. ಅಂದು ಶಿಕ್ಷಣ ನೀಡಿದ ಶಿಕ್ಷಕರು ಇಂದಿಗೂ ನನಗೆ ಪ್ರೀಯರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದುದರಿಂದ ಉತ್ತಮ ಗುಣಗಳು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.ಶಾಲಾ ಮುಖ್ಯಶಿಕ್ಷಕಿ ಚಂದ್ರಕಲಾ ವಾರ್ಷಿಕ ವರದಿ ವಾಚನ ಮಾಡಿ ಶಾಲೆಯು ಮಕ್ಕಳ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಹೇಳಿದರು. ಶಿಕ್ಷಕ ಶಿವಾನಂದ ಬಾಳಿಗ ಗಣೇಶೋತ್ಸವ ಸಮಿತಿ ವರದಿ ನೀಡಿದರು.
ಶಾಲಾಡಳಿತ ಸಮಿತಿ ಸದಸ್ಯ ಪ್ರವೀಣ್ ಕಿಣಿ , ಪ್ರಭಾಕರ ಪೈ, ಪುರಸಭಾ ಸದಸ್ಯ ಜಗದೀಶ ಕುಂದರ್, ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶಾಂತಾ ಬಾೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜೊತೆ ಕಾರ್ಯದರ್ಶಿ ಮಲ್ಲಿಕಾ ಕುಮಾರಿ, ಶಾಲಾ ನಾಯಕ ಮಾ| ಹರ್ಷಿತ್, ಶಾಲಾ ನಾಯಕಿ ಕು| ಅಕ್ಷತಾ ಪಾಲ್ಗೊಂಡಿದ್ದರು.ಶಾಲಾ ಸಂಚಾಲಕರು ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಮ್ಮ ಪ್ರಸ್ತಾವನೆ ನೀಡಿ ವಂದಿಸಿದರು. ಕೋಶಾ„ಕಾರಿ ಪರಮೇಶ್ವರ ಎಂ., ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.
