ಬಂಟ್ವಾಳ: ಅಪ್ರಾಪ್ತ ಯುವತಿಯೋರ್ವಳಿಗೆ ವಿವಾಹಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು, ಯುವತಿಯ ಹುಟ್ಟಿದ ದಿನಾಂಕದ ದಾಖಲೆ ಒದಗಿಸುವಂತೆ ಬಂಟ್ವಾಳ ತಹಶೀಲ್ದಾರರ ಮೂಲಕ ನೋಟಿಸ್ ಜಾರಿ ಮಾಡಿದ ಘಟನೆ ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಶಾಂತಿಯಂಗಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕೇರಳ ಮೂಲದ ಯುವತಿಯೋರ್ವಳು ಶಾಂತಿಯಂಗಡಿಯ ಮಾವನಮನೆಯಲ್ಲಿ ವಾಸ್ತವ್ಯವಿದ್ದು, ಮಾವನ ಉಸ್ತುವಾರಿಯಲ್ಲೇ ಮದುವೆಗೆ ಸಿದ್ದತೆ ನಡೆಸಲಾಗಿತ್ತು ಎನ್ನಲಾಗಿದೆ.

images

ಸಾರ್ವಜನಿಕದ ಊರಿನ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆ ಮನೆಗೆ ಭೇಟಿ ನೀಡಿದ ತಾಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ ನೇತೃತ್ವದ ತಂಡ ಮನೆಮಂದಿಯಲ್ಲಿ ವಿಚಾರಿಸಿದಾಗ, ಯುವತಿ ಕೇರಳ ಮೂಲದವಳಾಗಿದ್ದು, 18 ವರ್ಷ ಕಳೆದಿದೆ ಎಂದು ಮನೆಮಂದಿ ಮಾಹಿತಿ ನೀಡಿದ್ದಾರೆ. ಈ ವೇಳೆ ಹುಟ್ಟಿದ ದಿನಾಂಕದ ದಾಖಲೆ ಕೇಳಿದಾಗ, ದಾಖಲೆ ಎಲ್ಲಾ ಕೇರಳದಲ್ಲಿದ್ದು, ಅಲ್ಲಿ ಪ್ರತಿಭಟನೆಯ ಕಾರಣ ಶನಿವಾರ ಹಾಜರು ಪಡಿಸಲಾಗುತ್ತಿಲ್ಲ, ಸೋಮವಾರ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಾಗಿ ಬಂಟ್ವಾಳ ತಹಶೀಲ್ದಾರರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಜನನ ಧೃಡೀಕರಣ ಪತ್ರ ಹಾಜರುಪಡಿಸುವಂತೆ ನೋಟೀಸು ಜಾರಿ ಮಾಡಿದ್ದಾರೆ. ಈ ನಡುವೆ ಶನಿವಾರ ಆ ಯುವತಿಗೆ ಬಿ.ಸಿ.ರೋಡು ಸಮೀಪದ ಮದುವೆ ಹಾಲ್ ನಲ್ಲಿ ವಿವಾಹ ನೆರವೇರಿದೆ ಎಂದು ಹೇಳಲಾಗಿದೆ. ಆದರೆ ಈ ವಿವಾಹ ನಡೆದಿರುವ ಬಗ್ಗೆ ಇಲಾಖಾ ಅಧಿಕಾರಿಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

By Suddi9

Leave a Reply

Your email address will not be published. Required fields are marked *