ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೂ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಧಾರುಣ್ ಅಯ್ಯ ಸ್ವಾಮಿ ಅರ್ಹತೆ ಪಡೆದಿದ್ದಾರೆ.

ಧಾರುಣ್ ಜತೆಗೆ ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿ ಇಂದ್ರಜಿತ್( ಶಾಟ್ಪುಟ್), ಹಳೆ ವಿದ್ಯಾರ್ಥಿಗಳಾದ ಪೂವಮ್ಮ ಹಾಗೂ ಅಶ್ವಿನಿ ಅಕ್ಕುಂಜೆ (4*400 ಮೀಟರ್ ರಿಲೇ) ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮೂಲತ ತಮಿಳ್ನಾಡಿನವರಾದ ಈತ ಪ್ರಸ್ತುತ ಆಳ್ವಾಸ್ನ ಬಿಹೆಚ್ಆರ್ಡಿ ದ್ವಿತೀಯ ವರ್ಷದ ವಿದ್ಯಾರ್ಥಿ. 20 ವರ್ಷವ ಪ್ರಾಯದ ಈತ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಇತ್ತೀಚಗೆ ನಡೆದ ಏಶ್ಯಾನ್ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕವನ್ನು ಗಳಿಸಿದ್ದಾನೆ.
4*400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ ಆರು ಆಟಗಾರರ ಪೈಕಿ ಧಾರುಣ್ ಕೂಡ ಒಬ್ಬ. ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್ನ 400 ಮೀಟರ್ ಓಟದಲ್ಲಿ ಚಿನ್ನ, ಹರ್ಡಲ್ಸ್ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. 400 ಮೀಟರ್ ಓಟವನ್ನು 46.31ಸೆಕೆಂಡ್ಸ್ನಲ್ಲಿ ಗುರಿಮುಟ್ಟಿರುವುದು ಧಾರುಣ್ ಶ್ರೇಷ್ಠ ಸಾಧನೆಯಾಗಿದೆ.
ಒಂದು ಲಕ್ಷ ನಗದು ಪುರಸ್ಕಾರ:
ರಿಯೂ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ಧಾರುಣ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಒಂದು ಲಕ್ಷ ನಗದು ಪುರಸ್ಕಾರವನ್ನು ನೀಡಲಾಗಿದೆ. ಅದಲ್ಲದೆ ಆತನ ತರಬೇತಿಗೆ ಪ್ರತಿ ತಿಂಗಳು ಸುಮಾರು ರೂ 20 ಸಾವಿರ ಸಂಸ್ಥೆ ಖರ್ಚು ಮಾಡುತ್ತಿದೆ.
—
ಉನ್ನತ ಸಾಧನೆ:
ಆಳ್ವಾಸ್ನ ವಿದ್ಯಾರ್ಥಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವುದು ದೊಡ್ಡ ವಿಚಾರ. ಹೀಗೆ ಕ್ರೀಡಾ ರಂಗದಲ್ಲಿ ಉನ್ನತ ಸಾಧನೆ ಮಾಡುವಂತಾಗಬೇಕು ಎನ್ನುವ ಆಸೆಯಿಂದಲೇ ಆಳ್ವಾಸ್ ತನ್ನ ಕ್ರೀಡಾ ವಿದ್ಯಾರ್ಥಿಗಳಿಗೆ ತರಬೇತಿ, ಅವರ ಖರ್ಚು ವೆಚ್ಚ ಭರಿಸುವಿಕೆ, ತ್ಯಾಗ ಮಾಡಿದ್ದು ಇಂತಹ ಸಾಧನೆಗಳು ಸಮಾಧಾನ ನೀಡುತ್ತವೆ.
1996ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಆಳ್ವಾಸ್ ಪ್ರಾಯೋಜಿತ ಸತೀಶ್ ರೈ ಪಾಲ್ಗೊಂಡಿದ್ದರು. ಬಳಿಕ ನಾಲ್ಕು ಮಂದಿ ಆಳ್ವಾಸ್ ಬಳಗದವರಾಗಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ.
-ಡಾ.ಎಂ. ಮೋಹನ ಆಳ್ವ, ಅಧ್ಯಕ್ಷರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ
