ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಟೋಲ್‍ಗೇಟ್ ಕೇಂದ್ರದ ಗುತ್ತಿಗೆದಾರ, ಬೆಳ್ತಂಗಡಿ ತಾಲ್ಲೂಕಿನ ಮೊಗೆರೋಡಿ ನಿವಾಸಿ ಎಂ.ಗೋಪಾಲಕೃಷ್ಣ ಮೇಲಾಂಟ(68) ಇವರು ಅಸೌಖ್ಯದಿಂದ ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಮತ್ತು ಸಹೋದರರು ಇದ್ದಾರೆ. ಮೂಲತಃ ಬೆಳ್ತಂಗಡಿ ತಾಲ್ಲೂಕಿನ ಪದ್ಮುಂಜ ಸಮೀಪದ ಮೊಗೆರೋಡಿ ಕೃಷಿಕ ಮನೆತನದಲ್ಲಿ ಜನಿಸಿದ ಇವರು ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು, ಸುರತ್ಕಲ್ ಮತ್ತಿತರ ಟೋಲ್ ಸಂಗ್ರಹ ಕೇಂದ್ರದ ಗುತ್ತಿಗೆದಾರರಾಗಿ ಮಂಗಳೂರಿನಲ್ಲೇ ನೆಲೆಸಿದ್ದರು. ಕಳೆದ 40 ವರ್ಷಗಳಿಂದ ಮಂಗಳೂರು ನಗರದ ವಿವಿಧ ಲಯನ್ಸ್ ಘಟಕದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಸುರತ್ಕಲ್ ಲಯನ್ಸ್ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಮಂಗಳೂರಿನ ಹಂಪನ್‍ಕಟ್ಟೆ, ಲಾಲ್‍ಭಾಗ್, ಮೆಟ್ರೋಗೋಲ್ಡ್ ಲಯನ್ಸ್ ಕ್ಲಬ್ ಮತ್ತು ಜಿಲ್ಲಾ ಸಮ್ಮೇಳನ ಸಂಯೋಜಕರಾಗಿ, ಪ್ರಾಂತೀಯ ಅಧ್ಯಕ್ಷರಾಗಿ ಶ್ರಮಿಸಿದ್ದಾರೆ. ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಸಮಾಜಮುಖಿ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಎಂ.ಜಿ.ಮೇಲಾಂಟ ಎಂದೇ ಗುರುತಿಸಿಕೊಂಡಿದ್ದರು.
24btl-Gopalakrishna Melantaಮೃತರ ಅಂತ್ಯಕ್ರಿಯೆಯು ಮೊಗೆರೋಡಿ ಹುಟ್ಟೂರಿನಲ್ಲಿ ಗುರುವಾರ ಸಂಜೆ ನೆರವೇರಿತು. ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಂಟ್ವಾಳ ತಾಲ್ಲೂಕಿನ ಬಂಟರ ಸಂಘದ ಪದಾಧಿಕಾರಿಗಳು ಮತ್ತು ಟೋಲ್ ಸಿಬ್ಬಂದಿಗಳು ಸಹಿತ ಅಪಾರ ಮಂದಿ ನಾಗರಿಕರು ಬ್ರಹ್ಮರಕೂಟ್ಲು ಟೋಲ್‍ಗೇಟ್ ಬಳಿ ಗುರುವಾರ ಮಧ್ಯಾಹ್ನ ಮೃತರ ಅಂತಿಮ ದರ್ಶನ ಪಡೆದರು.

By Suddi9

Leave a Reply

Your email address will not be published. Required fields are marked *