ಮೂಡುಬಿದರೆ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರದ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇ ಶನಾಲಯ, ಬೆಂಗಳೂರು, ರಾಜ್ಯ ಎನ್ಎಸ್ಎಸ್ ಘಟಕ , ಮಂಗಳೂರು ವಿ.ವಿ. ಎನ್ಎಸ್ಎಸ್ ಮತ್ತು ಮೂಡುಬಿದರೆಯ ಆಳ್ವಾಸ್ ಕಾಲೇಜು ಇವುಗಳ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ವಾರ ಕಾಲ ನಡೆದ ರಾಷ್ಟ್ರೀಯ ಭಾವೈಕ್ಯ ಶಿಬಿರ ಗುರುವಾರ ಸಂಪನ್ನಗೊಂಡಿತು.
ಮಂಗಳೂರು ವಿ.ವಿ. ಕುಲಸಚಿವ ಪ್ರೊ ಟಿ.ಡಿ. ಕೆಂಪರಾಜ್ ಮುಖ್ಯ ಅತಿಥಿಯಾಗಿ ಮಾತನಾಡಿ, `ಶ್ರಮದಾನ ಮೂಲವಾಗಿದ್ದ ಎನ್ ಎಸ್ ಎಸ್ನ ಧ್ಯೇಯೋದ್ಧೇಶಗಳು ಬದಲಾಗುತ್ತ ಬಂದಿದ್ದು ಯುವಜನರನ್ನು ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ಸಮಜೋ ಸಾಂಸ್ಕೃತಿಕವಾಗಿ ಅವರ  ಮನೋಭೂಮಿಕೆಯನ್ನು ಸಿದ್ಧಪಡಿಸುವಲ್ಲಿ ಎನ್ಎಸ್ಎಸ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
mbd_feb4_4
ಎನ್ಎಸ್ಎಸ್ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯ ರಕ್ಷಣೆ ಎನ್ಎಸ್ಎಸ್ನ ಆದ್ಯತೆಯಾಗಿದೆ’ ಎಂದು ಹೇಳಿದರು ಹಾಗೂ ಶಿಬಿರವು ಈ ಎಲ್ಲ ದೃಷ್ಟಿಯಲ್ಲಿ ಯಶಸ್ವಿಯಾಗಿ ನಡೆದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.
160 ಮಂದಿ ಶಿಬಿರಾರ್ಥಿಗಳ ಪರವಾಗಿ ಶರಧಿ (ಕರ್ನಾಟಕ), ವಿವೇಕಾನಂದ (ಮಹಾರಾಷ್ಟ ), ಶ್ರಭಾನಿ (ಒರಿಸ್ಸಾ), ಭಾನುಕೀರ್ತಿ (ಆಂಧ್ರಪ್ರದೇಶ), ಸಾಂಘವಿ (ತೆಲಂಗಾಣ), ಬೆಂಜೋ (ಕೇರಳ)ಮತ್ತು ಜ್ಯೂನಿಟಾ (ತಮಿಳ್ನಾಡು), ಅಧಿಕಾರಿಗಳ ಪರವಾಗಿ ಮದ್ರಾಸ್ ವಿವಿಯ ಸೆಂಥಿಲ್ ಮತ್ತು ಒರಿಸ್ಸಾದ ಗೌರಾಂಗ ಪಾಂಡೆ ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರದ ವ್ಯವಸ್ಥೆ, ಆತಿಥ್ಯ ಮತ್ತು ವಿಶೇಷವಾಗಿ ಸಾಂಸ್ಕೃತಿಕ ವೈವಿಧ್ಯದ ಕುರಿತು ತುಂಬು ಶ್ಲಾಘನೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಆಳ್ವಾಸ್ ಎನ್ಎಸ್ಎಸ್ ಅಧಿಕಾರಿ ಗುರುದೇವ ಎನ್. ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ, ಶಿಬಿರ ಸ್ಥಾನೀಯ ಉಸ್ತುವಾರಿ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.ಮಂಗಳೂರು ವಿ.ವಿ. ಎನ್ಎಸ್ಎಸ್ ಸಂಯೋಜನಾಧಿಕಾರಿ ಪ್ರೊ.ವಿನೀತಾ ಕೆ. ಶಿಬಿರದ ವರದಿ ವಾಚಿಸಿದರು ಹಾಗೂ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಆಶಿತಾ ಎಸ್. ಸಲ್ಡಾನ್ಹ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *