ಬಂಟ್ವಾಳ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್‍ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‍ಗಾಂಧಿ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಮಾಡಿರುವ ಆರೋಪವನ್ನುತೀವ್ರವಾಗಿ ಖಂಡಿಸಿದ ಪಾಣೆಮಂಗಳೂರು ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ  ಬಿ.ಎಂ.ಅಬ್ಬಾಸ್ ಅಲಿ, ಕಾಂಗ್ರೆಸ್ ನಾಯಕರ ಮೇಲಿನ ಆರೋಪ ಸತ್ಯಕ್ಕೆದೂರವಾಗಿದ್ದು, ಈ ಪ್ರಕರಣದಲ್ಲಿ ಕಾಂಗ್ರೆಸ್‍ ಗೆಲ್ಲಲಿದೆಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಮಾಡಿರುವಆರೋಪವನ್ನು ಖಂಡಿಸಿ ಪಾಣೆಮಂಗಳೂರು ಬ್ಲಾಕ್‍ಕಾಂಗ್ರೆಸ್ ವ್ಯಾಪ್ತಿಯ ಬಿ.ಮೂಡಾ ವಲಯಕಾಂಗ್ರೆಸ್‍ಕಾರ್ಯಕರ್ತರು ಬುಧವಾರ ಬಿ.ಸಿ.ರೋಡ್‍ನಲ್ಲಿ ನಡೆಸಿದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

24-3
ಜಿಲ್ಲಾ ಪಂಚಾಯತ್ ಸದಸ್ಯಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿರುವ ಅಕ್ರಮಗಳನ್ನು ಮರೆಮಾಚಲುಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಬಿಜೆಪಿ, ಜನರ ಭಾವಣೆಗಳನ್ನು ತಿರುಗಿಸಲುಇಂತಹಕುತಂತ್ರ ನಡೆಸುತ್ತಿದೆಎಂದು ಆರೋಪಿಸಿದರು.
ಧರಣಿಯಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಭೂ ಬ್ಯಾಂಕ್‍ಅಧ್ಯಕ್ಷ ಸುದರ್ಶನ್‍ಜೈನ್, ಪುರಸಭೆ ಸದಸ್ಯರಾದ ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಮುಹಮ್ಮದ್ ನಂದರಬೆಟ್ಟು, ಮುಹಮ್ಮದ್ ಶರೀಫ್, ಪ್ರಭಾ ಸಾಲಿಯಾನ್, ಅಬೂಬಕ್ಕರ್ ಗೂಡಿನಬಳಿ, ಲೋಲಾಕ್ಷ ಶೆಟ್ಟಿ, ಪರಮೇಶ್ವರ್, ಮುಹಮ್ಮದ್ ನಂದಾವರ, ಲುಕ್ಮಾನ್, ಅಬೂಬಕ್ಕರ್ ಸಿದ್ದೀಕ್‍ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *