ಮೂಡುಬಿದಿರೆ: ಅಶ್ವತ್ಥಪುರ ಬೃಹತ್ ಗೋಳಿಮರದಡಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಕೊಪ್ಪದ ಕುಮೇರು ಶಾಲೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ವಿದ್ಯಾರ್ಥಿನಿ ಸೃಷ್ಠಿ, ನೀರ್ಕೆರೆ ಶಾಲೆಗೆ ತೆರೆದ ಬಾವಿಯನ್ನು ನಿರ್ಮಿಸಿಕೊಡುವಂತೆ ಹೇಮಲತಾ, ಮೈದಾನವನ್ನು ಸಮತಟ್ಟುಗೊಳಿಸುವಂತೆ ನಿರ್ಕೇರೆ ಶಾಲೆಯ ವಿದ್ಯಾರ್ಥಿ ಮನೋಜ್, ಮಿಜಾರು ಪ್ರೌಢಶಾಲೆಯ ಬಳಿ ಬೀದಿ ದೀಪದ ವ್ಯವಸ್ಥೆ ಇಲ್ಲವೆಂದು ಶೃದ್ಧಾ, ಸ್ವಚ್ಛ ಗ್ರಾಮ ಅಭಿಯಾನದಲ್ಲಿ ತಮ್ಮ ಶಾಲೆಯಲ್ಲಿ ಯಾವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರೆಂದು ಬಂಗಬೆಟ್ಟು ಶಾಲೆಯ ಶರತ್ ಪ್ರಶ್ನಿಸಿದರು. ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಅರ್ಜಿ ಕೊಡಿ, ನೀರ್ಕೆರೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ತೆರೆದ ಬಾವಿಯನ್ನು ನಿರ್ಮಿಸಿ ಕೊಡಲಾಗುವುದು ಎಂದು ಪಂಚಾಯಿತಿಯವರು ಮನವರಿಕೆ ಮಾಡಿದರು.
6mood Tenkamijaru (1)

6mood Tenkamijaru (2)ನಮ್ಮ ಶಾಲೆಯಲ್ಲಿ ಹುಡುಗರ ಶೌಚಾಲಯ ತೀರ ಹದಗೆಟ್ಟಿದೆ, ಸ್ವಚ್ಛತೆಯಿಲ್ಲ, ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲವೆಂದು ವಿದ್ಯಾರ್ಥಿ ದೀಪು ಸಮಸ್ಯೆಯನ್ನು ತಿಳಿಸಿದ. ಶಾಲೆಗೆ ಕ್ರೀಡಾಂಗಣದ ವ್ಯವಸ್ಥೆ ಇಲ್ಲ, ಶಾಲೆಯ ಕೊಠಡಿಯ ಮೇಲ್ಛಾವಣಿಯು ಕುಸಿಯುವ ಭೀತಿಯಲ್ಲಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಮಿಜಾರು ಬಂಗಬೆಟ್ಟು ಶಾಲೆಯ ವಿದ್ಯಾರ್ಥಿಗಳು ಸಭೆಯ ಗಮನಕ್ಕೆ ತಂದರು.
ನೀರಿನ ಸಮಸ್ಯೆಯನ್ನು ನಿವಾರಿಸಲು ಒಂದು ಬೋರ್‍ವೆಲ್ ತೆಗೆಯಲಾಗುವುದು, ಸೂಕ್ತ ಕ್ರೀಡಾಂಗಣಕ್ಕಾಗಿ ಕ್ರೀಡಾ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಕುಸಿಯುವ ಭೀತಿಯಲ್ಲಿರುವ ಶಾಲೆಯ ಮೇಲ್ಛಾವಣಿಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಉತ್ತರಿಸಿದರು. ಶೌಚಾಲಯವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನವರು ತಮ್ಮ ಮುಂದಿನ ಪ್ರಾಜೆಕ್ಟ್‍ನಲ್ಲಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಅವರು ತಿಳಿಸಿದರು.
ಕರಾಟೆ ತರಗತಿ, ಸ್ವಚ್ಛ ಅಭಿಯಾನ ಕಾರ್ಯಕ್ರಮಗಳನ್ನು ನಮ್ಮ ಶಾಲೆಗಳಲ್ಲೂ ಅನುಷ್ಠಾನಗೊಳಿಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಮಂಗಳೂರಿನ ವೆಲೊರೆಡ್ ಸಂಸ್ಥೆಯ ಆಶಾ ಬೇಕಲ್ , ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪುತ್ತಿಗೆ ವಲಯದ ಮೇಲ್ವೀಚಾರಕಿ ಭಾರತಿ, ಶಿಕ್ಷಣ ಇಲಾಖೆಯ ರಾಜಶ್ರೀ ನಾಯಕ್ ಮಾಹಿತಿ ನೀಡಿದರು.
ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ನಂತರ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ನಡೆಯಿತು. ಮೊದಲು ಜಾಗೃತಿ ಜಾಥಾ ನಡೆಯಿತು.

By Suddi9

Leave a Reply

Your email address will not be published. Required fields are marked *