ರೂ.28 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಸಾರ್ವಜನಿಕ ಬಳಕೆಗೆ ಮುಕ್ತ
ಮೂಡುಬಿದರೆ: ಬಹುವಿಧದಲ್ಲಿ ಅಭಿವೃದ್ಧಿ ಹೊಂದಿರುವ ಮೂಡುಬಿದರೆಯಲ್ಲಿ ಸುಸಜ್ಜಿತ ಪಾರ್ಕ್ ಬೇಕು ಎನ್ನುವ ನಾಗರಿಕ ಬೇಡಿಕೆ ಈಡೇರುತ್ತಿದೆ. ಪೇಟೆಯ ಸಮೀಪ ಜ್ಯೋತಿನಗರದಲ್ಲಿರುವ ಗಾಂಧಿಪಾರ್ಕ್ ಸುಮಾರು ರೂ.28 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಸಾರ್ವಜನಿಕ ಬಳಕೆಗೆ ತೆರೆದುಕೊಳ್ಳುತ್ತಿದೆ.
mbd_oct7_1 (1)

mbd_oct7_1 (2)

mbd_oct7_1 (4)

mbd_oct7_1 (5)

mbd_oct7_1 (6)

mbd_oct7_1 (7)

mbd_oct7_1 (Karanji)ಮೂಡುಬಿದರೆ ಪೇಟೆಯಿಂದ ಬಂಟ್ವಾಳ ಹಾಗೂ ಬೆಳ್ತಂಗಡಿ ರಾಜ್ಯ ಹೆದ್ದಾರಿಗೆ ಕವಲೊಡೆಯುವ ಜ್ಯೋತಿನಗರ ಪ್ರದೇಶದಲ್ಲಿರುವ ಈ ಪಾರ್ಕ್ ನಾಲುವರೆ ದಶಕಗಳ ಹಿಂದಿನದ್ದಾಗಿದೆ. 1969ರಲ್ಲಿ ಮಹಾತ್ಮ ಗಾಂಧೀಜಿ ಅವರ ಜನ್ಮಶತಾಬ್ದಿಯ ಸಂದರ್ಭ ಸಮಾಜ ಮಂದಿರ ಸಂಸ್ಥೆಯು ಗಾಂಧಿಪಾರ್ಕ್ ನಿರ್ಮಿಸಿತು. ಗಾಂಧಿಜಯಂತಿ, ಇನ್ನರ್‍ವೀಲ್ ಕ್ಲಬ್ ಕಾರ್ಯಕ್ರಮಗಳು ಇಲ್ಲಿ ಹಿಂದೆ ನಡೆಯುತ್ತಿತ್ತು. ಗ್ರಂಥಾಲಯ, ಟಿ.ವಿ ರೇಡಿಯೋ ವ್ಯವಸ್ಥೆಗಳೊಂದಿಗೆ ಅಂದು ಜನರನ್ನು ಪಾರ್ಕ್ ಆಕರ್ಷಿಸುತ್ತಿತ್ತು. ಆದರೆ ಕೆಲವು ವರ್ಷ ಸರಿಯಾದ ನಿರ್ವಹಣೆಯಿಲ್ಲದ ಪರಿಣಾಮ ಪಾರ್ಕ್ ಸಾರ್ವಜನಿಕ ಬಳಕೆಯಿಂದ ವಿಮುಖವಾಗತೊಡಗಿತು.
ಪುರಸಭೆ ಪಾರ್ಕ್ ಅನನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಅಭಿವೃದ್ಧಿಪಡಿಸುತ್ತಿದೆ. 18 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಯತೊಡಗಿತು. 1.30 ಎಕರೆ ವಿಶಾಲ ಜಾಗದಲ್ಲಿರುವ ಪಾರ್ಕ್‍ನ ಅಭಿವೃದ್ಧಿಗೆ ಈಗಾಗಲೇ 13ನೇ ಹಣಕಾಸು ಯೋಜನೆಯಲ್ಲಿ 19 ಲಕ್ಷ ವೆಚ್ಚದ ಕೆಲಸಗಳು ಪೂರ್ಣಗೊಂಡಿದೆ. 14ನೇ ಹಣಕಾಸು ಯೋಜನೆಯಲ್ಲಿ ಮತ್ತೆ 9 ಲಕ್ಷಗಳನ್ನು ಮೀಸಲಿರಿಸುವ ಕುರಿತು ಪ್ರಸ್ತಾವನೆಯಿದೆ. ಸುಮಾರು 10 ಲಕ್ಷ ವೆಚ್ಚದಲ್ಲಿ ಪಾರ್ಕ್ ಹಸಿರುಮಯವಾಗಿದೆ. ಹಿಂದೆ ಇದ್ದ ಮರಗಳನ್ನು ಉಳಿಸಿಕೊಂಡಿದ್ದು, ಅಭಿವೃದ್ಧಿ ಸಂದರ್ಭ ವಿವಿಧ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಹೈಮಾಸ್ಟ್ ದೀಪ, ಕಾರಂಜಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪಾರ್ಕ್‍ನ ಆವರಣಕ್ಕೆ ತಾಗಿಕೊಂಡೆ ವಾಕಿಂಗ್ ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿದ್ದು,ಇಂಟರ್‍ಲಾಕ್ ಅಳವಡಿಸಲಾಗಿದೆ. ಪಾರ್ಕ್‍ನಲ್ಲಿ 9 ಕಲ್ಲುಬೆಂಚುಗಳಿದ್ದು, ಇನ್ನಷ್ಟು ಕಲ್ಲುಬೆಂಚುಗಳ ಅವಶ್ಯಕತೆಯಿದೆ. ಸ್ವಚ್ಛತೆ ಹಾಗೂ ಪಾರ್ಕ್ ರಕ್ಷಣೆಗೆ ಸಿಬ್ಬಂದಿಯೊಬ್ಬರನ್ನು ನೇಮಿಸಲಾಗಿದ್ದು, ಗಾರ್ಡ್ ಕೊಠಡಿ, ಪಾರ್ಕ್‍ಗೆ ಬರುವ ನಾಗರಿಕರಿಗೆ ಶೌಚಾಲಯ, ಕುಡಿಯುವ ನೀರಿನ ವುವಸ್ಥೆಯಾಗಬೇಕಾಗಿದೆ. ಪಾರ್ಕ್‍ನೊಳಗೆ 3 ಕಿರುಕೊಳಗಳಿದ್ದು, ಆಕರ್ಷಕವಾಗಿದೆ. ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡಿ ವ್ಯವಸ್ಥೆಯಿದೆ.
ಪಾರ್ಕ್‍ನಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡುವ ಯೋಜನೆಯನ್ನು ಪುರಸಭೆ ಮುಂದಿದೆ. ಪಾರ್ಕ್‍ನ ಹೃದಯ ಭಾಗದಲ್ಲಿ ಗೋಪುರವನ್ನು ಹೊಂದಿರುವ ಕಟ್ಟೆಯೊಂದರ ಮಧ್ಯೆ ಖಾಲಿ ಜಾಗವಿರುವುದರಿಂದ ಗಾಂಧಿ ಪ್ರತಿಭೆಯನ್ನು ಅಲ್ಲಿ ಅಳವಡಿಸಬಹುದಾಗಿದೆ. ಪಾರ್ಕ್‍ನಲ್ಲಿ ರೋಲರ್ ಸ್ಕೇಟಿಂಗ್ ರಿಂಗ್ ನಿರ್ಮಾಣ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಆಗುತ್ತಿದೆ.

By Suddi9

Leave a Reply

Your email address will not be published. Required fields are marked *