ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವೀರಕಂಭ ಗ್ರಾಮದ ಬಾಯಿಲ ಯುವಜನ ಸೇವಾ ಟ್ರಸ್ಟ್ ಮತ್ತು ಎಬಿ ಫ್ರೆಂಡ್ಸ್ ಸಂಘಟನೆ ವತಿಯಿಂದ ಕಳೆದ 10 ವರ್ಷದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಲ್ನಡಿಗೆ ಮೂಲಕ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದಾರೆ.
7btl-kateel
ಒಟ್ಟು 22 ಮಂದಿ ತಂಡವು ಈ ಬಾರಿಯೂ ಪಾದರಕ್ಷೆ ಧರಿಸದೆ 52 ಕಿ.ಮೀ. ಪಾದಯಾತ್ರೆ ಮೂಲಕ ಕ್ರಮಿಸಿ, ದೇವರ ದರ್ಶನ ಪಡೆದಿದೆ. ಈ ತಂಡದಲ್ಲಿ ಮೂವರು ಮಹಿಳೆಯರು, ಐವರು ಮಕ್ಕಳು ಹಾಗೂ 14 ಮಂದಿ ಪುರುಷರು ಇದ್ದಾರೆ. ಕಳೆದ ಗುರುವಾರ ರಾತ್ರಿ 2ಗಂಟೆಗದಿಲ್ಲಿಂದ ಹೊರಟ ತಂಡವು ಮರುದಿನ ಸಂಜೆ 4ಗಂಟೆಗೆ ಕಟೀಲು ತಲುಪಿದೆ.
ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರ, ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಗಳಿಗೂ ದಾರಿ ಮಧ್ಯೆ ಭೇಟಿ ನೀಡಿರುವುದಾಗಿ ಟ್ರಸ್ಟ್ನ ಅಧ್ಯಕ್ಷ ವೀರಕಂಭ ಗ್ರಾ.ಪಂ. ಸದಸ್ಯ ಜನಾರ್ದನ ಪೂಜಾರಿ ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *