ಕೈಕಂಬ: ವೇದಾಂತ ತತ್ವವನ್ನು ಸಾಮಾನ್ಯ ಜನರಿಗೆ ಅರ್ಥವಾಗಲೇಂದು ಭಗವಂತನ ಇಚ್ಚಾ ಶಕ್ತಿಯಿಂದ ವೇದ ವ್ಯಾಸರಿಂದ ರಚಿಸ್ಪಟ್ಟ ಮಹನ್ ಗ್ರಂಥವೇ ಶ್ರೀ ಮದ್ಭಾಗವತ.
11 ಸ್ಕಂಧಗಳಲ್ಲಿ 18 ಸಾವಿರ ಶ್ಲೋಕಗಳಿರುವ ಈ ಪರಮ ಪವಿತ್ರವಾದ ಗ್ರಂಥ 18ಪುರಾಣಗಳಲ್ಲಿ ಒಂಧಾಗಿರುತ್ತದೆ ಇದರ ಶ್ರವಣ ಮನನ ಮಾಡಿದ ಪ್ರತಿಯೊಬ್ಬ ಭಕ್ತನಿಗೂ ಭಗವಂತನ ದರ್ಶನ ಖಂಡಿತವಾಗಿಯೂ ಪ್ರಾಪ್ತವಾಗುತ್ತದೆ. ಬ್ರಹ್ಮ ಜಾ ನಿಯಾದ ಸುಖಮುನಿಯು ಪರೀಕ್ಷಿತ ರಾಜನಿಗೆ ಈ ಶ್ರೀಮದ್ಬಾಗವತವನ್ನು ಸತತ ಏಳು ದಿನ ಹಗಲು ರಾತ್ರಿ ವಾಚಿಸಿ ಕಡೆಗೆ ಪರೀಕ್ಷಿತನು ಮುಕ್ತಿಯನ್ನು ಪಡೆದನು ಎಂದೂ ಪ್ರತೀತಿ ಎಂದು ಕೋಡಿಮಜಲು ವಿದ್ವಾನ್ ಅನಂತಪದ್ಮನಾಭ ಉಪಧ್ಯಾಯ ಅವರು ಹೇಳಿದರು. ಅವರು ಪೊಳಲಿ ರಾಮಕೃಷ್ಣತಪೋವನದಲ್ಲಿ ಏಳು ದಿನಗಳ ಸಪ್ತಾಹದಲ್ಲಿ ಶ್ರೀಮದ್ಭಾಗವತದ ವಿಶೇಷತೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸ್ವಾಮಿ ಪದ್ಮಪಾದಾನಂದ, ಶ್ರೀಪತಿ ಭಟ್, ಬ್ರಹ್ಮಚಾರಿ ಶಶಿಮಹರಾಜ್, ಪೊಳಲಿ ರಾಮ್ ಭಟ್, ಸುಬ್ರಾಯ ಕಾರಂತ, ವಿಶ್ವೇಶ್ವರ ಭಟ್ ಅನೇಕ ಭಕ್ತರು ಭಾಗವತ ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಅನಂತಪದ್ಮನಾಭ ಉಪಾಧ್ಯಾಯರನ್ನು ಹಾಗೂ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಿ ಗೌರವಿಸಿದರು ಭಾಗವತ ಸಪ್ತಾಹವು ಆ.5ರಿಂದ ಆ.5ರಿಂದ ಸಂಜೆ 6ಗಂಟೆಯಿಂದ ಪ್ರಾರಂಭಗೊಂಡು ರಾತ್ರಿ 8 ಗಂಟೆಯವರೆಗೆ 7ದಿನಗಳ ಸಪ್ತಾಹ ಆ.11ರಂದು ಮಂಗಳವಾರ ಮುಕ್ತಾಯ ಗೊಂಡಿತು.












