ದಂಡೆಗೋಳಿ : ಸುಮಾರು 75 ಲಕ್ಷ ವೆಚ್ಚದಲ್ಲಿ ಪುನರ್ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕಿನ ಬುಡೋಳಿ ಗ್ರಾಮದ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದಲ್ಲಿ ಪುನರ್ ನಿರ್ಮಾಣದ ಬಗ್ಗೆ ಭಕ್ತಾದಿಗಳ ಸಮಾಲೋಚನಾ ಸಭೆ ನಡೆಯಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಹರೀಶ ನಾಯ್ಕ ಮಾಣಿಬೆಟ್ಟು ಮಾತನಾಡಿ ನಾನು ಎಂಬುದನ್ನು ಮರೆತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಸರ್ವಭಕ್ತರು ಶ್ರದ್ದಾಭಕ್ತಿಯಿಂದ ಕ್ಷೇತ್ರದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡರೆ ಕ್ಷೇತ್ರವೂ ಬೆಳಗಿದಂತೆ ನಮ್ಮ ಮನೆಮನಗಳು ಬೆಳಗಿ ಜೀವನ ಪಾವನವಾಗುತ್ತದೆ ಎಂದರು.
1 copy
ಸೇವಾ ಸಮಿತಿ ಅಧ್ಯಕ್ಷ ಬಿ.ಮಂಜಪ್ಪ ನಾಯ್ಕ ಮಾಣಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿಗೆ ಊರ ಪರವೂರ ಅಪಾರ ಭಕ್ತಾಧಿಗಳು ಜಾತಿ, ಮತ ಭೇದವಿಲ್ಲದೆ ಬಂದು ತಮ್ಮ ಕಷ್ಟವನ್ನು ಹೇಳಿ, ತಮ್ಮ ಇಷ್ಠಾರ್ಥವನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ನಾಯ್ಕ.ಕೆ.ಬೆಳ್ಳಾರೆ ಮಾತನಾಡಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಪುನರ್ನಿರ್ಮಾಣದ ಕಾಮಗಾರಿಗೆ ಚಾಲನೆ ದೊರೆತಿದ್ದು ಈ ನಿಟ್ಟಿನಲ್ಲಿ ಸಮಸ್ತ ಭಕ್ತಾದಿಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದರು.
ಪತ್ರಕರ್ತ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶ್ರದ್ಧಾಪೂರ್ವಕವಾದ ಭಕ್ತಿ, ಸಮರ್ಪಣಾ ಮನೋಭಾವನೆ ಹಾಗೂ ಸಂಘಟನಾ ಶಕ್ತಿಯಿಂದ ತೊಡಗಿಸಿಕೊಂಡರೆ ಯಾವುದೇ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಆರಾಧನಾಲಯಗಳು ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾಗದೇ ಸಮಾಜದ ಸಮಗ್ರ ಪ್ರಗತಿಯೊಂದಿಗೆ ತೊಡಗಿಸಿಕೊಳ್ಳುತ್ತಾ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪೂರಕವಾಗಬೇಕು ಎಂದರು. ಹಿರಿಯರಾದ ಈಶ್ವರ ನಾಯ್ಕ ನೀರೋಳ್ಯ, ದೇರಡ್ಕ ಮರಾಠಿ ಸೇವಾ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಸಮಿತಿ ಕೋಶಾಧಿಕಾರಿ ವಾಮನ ನಾಯ್ಕ ಉಪಸ್ಥಿತರಿದ್ದರು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದ್ರೆ, ಮಂಗಳೂರು, ಕಾಸರಗೋಡು, ಸಕಲೇಶಪುರ ಮೊದಲಾದೆಡೆಗಳ ಭಕ್ತಾದಿಗಳು ಭಾಗವಹಿಸಿದ್ದರು

By Suddi9

Leave a Reply

Your email address will not be published. Required fields are marked *