ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ಎಂಬಲ್ಲಿ ಕೃಷಿಕ ಚಂದಪ್ಪ ನಾಯ್ಕ ಎಂಬವರು ಗದ್ದೆ ಉಳುಮೆಗಾಗಿ ಸಾಕಿದ್ದ ಎರಡು ಕೋಣಗಳನ್ನು ಗುರುವಾರ ತಡರಾತ್ರಿ ಕಳ್ಳರು ಕೊಂಡೊಯ್ದ ಘಟನೆ ನಡೆದಿದೆ.
ಇವರು ಶುಕ್ರವಾರ ಬೆಳಿಗ್ಗೆ ಎಂದಿನಂತೆ ಹಟ್ಟಿಗೆ ಹೋಗಿದ್ದ ವೇಳೆ ಜೋಡಿ ಕೋಣ ಕಳವು ಗಮನಕ್ಕೆ ಬಂದಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಗತಿಪರ ಕೃಷಿಕರಾಗಿರುವ ಇವರು ಗದ್ದೆ ಉಳುಮೆಗಾಗಿ ಟ್ರ್ಯಾಕ್ಟರ್ ಬದಲಿಗೆ ದುಬಾರಿ ವೆಚ್ಚದಲ್ಲಿ ಈಚೆಗಷ್ಟೇ ಜೋಡಿ ಕೋಣ ಖರೀದಿಸಿದ್ದರು ಎನ್ನಲಾಗಿದೆ.
