ನವಿರಾದ ಪ್ರೇಮಕಥೆ, ಯುವಮನಸುಗಳಿಗೆ ಕಚಗುಳಿಯಿಡುವ ಸನ್ನಿವೇಶ, ನಾಯಕ-ನಾಯಕಿಯರ ಪ್ರಬುದ್ಧ ನಟನೆ, ಎಲ್ಲಕ್ಕಿಂತ ಹೆಚ್ಚಾಗಿ ಹೊಸತನ ತುಂಬಿದ ಚಿತ್ರಕಥೆ… ಇದೇ `ಸುವ್ವಿ’ ಚಿತ್ರದ ಜೀವಾಳ. ಇದೇ ಕಾರಣಕ್ಕೆ ಹೊಸ ಮುಖಗಳೇ ಹೆಚ್ಚಾಗಿ ಕಾಣಿಸಿಕೊಂಡಿರುವ ಸುವ್ವಿ ಚಿತ್ರ ಗೆಲುವಿನ ಪಯಣದಲ್ಲಿದೆ.

suvee

suvvee (1)

suvvee (3)

suvvee (4)

suvvee (5)

suvvee (6)

suvvee (8)

suvvee (10)

suvvee (11)

 

ಮಂಗಳೂರಿನ ಹುಡುಗ ಬಾಲನಟನಾಗಿ ಜನಮನ ಗೆದ್ದಿದ್ದ ಅರ್ಜುನ್ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ. ಆತನಿಗೆ ನಾಯಕಿಯರಾಗಿ ರಮ್ಯಾ ಹಾಗೂ ಮಾನಸಿ ನಟನೆಯಲ್ಲಿ ಪಳಗಿದ್ದಾರೆ. `ಅಬ್ಬಬ್ಬಾ ಎಂಥಾ ಹುಡುಗ’ ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಅಲ್ಲಿಗೂ-ಇಲ್ಲಿಗೂ ಸಂಪೂರ್ಣ ಭಿನ್ನರಾಗಿ ಕಂಡುಬರುತ್ತಾರೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಆರಂಭವಾಗುವ ಪ್ರೇಮ್ ಕಹಾನಿ ದಾರಿಯುದ್ದಕ್ಕೂ ಚೆನ್ನಾಗೇ ಸಾಗುತ್ತದೆ. ಅಲ್ಲಲ್ಲಿ ಕಾರಿನ ಟೈರ್ ಪಂಕ್ಚರ್, ವೈಪರ್ ಸಮಸ್ಯೆ ಎದುರಾದರೂ ಪ್ರೇಮ ಪಯಣಕ್ಕೆ ಎಲ್ಲೂ ಭಂಗವಾಗುವುದಿಲ್ಲ.

ತನ್ನ ಮದುವೆಯಾಗಲಿರುವ ಹುಡುಗಿಯನ್ನು ಹುಡುಕಿಕೊಂಡು ಹೊರಟ ಅರ್ಜುನ್ ಹಾಗೂ ತನ್ನ ಪ್ರೇಮಿಗಾಗಿ ಬೆಂಗಳೂರಿಗೆ ತೆರಳುವ ನಾಯಕಿ `ಸುವ್ವಿ’ ಮಧ್ಯೆ ಮೊದಲ ಮಳೆಗೆ ಪ್ರೀತಿ ಕುಡಿಯೊಡೆಯುತ್ತದೆ. ಅಲ್ಲಲ್ಲಿ ಹಾಸ್ಯಭರಿತ ಸಂಭಾಷಣೆ, ಹಾಡುಗಳು, ಸಭ್ಯತೆಯ ಎಲ್ಲೆ ಮೀರದ ದೃಶ್ಯಾವಳಿಯಿಂದಾಗಿ ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಚಿತ್ರದ ಇನ್ನೊಂದು ಮುಖ್ಯ ಅಂಶವೆಂದರೆ ಚಿತ್ರದ ನಿರ್ಮಾಪಕ ಪದ್ಮನಾಭ ರೆಡ್ಡಿ ಅವರು ಸೈಕೋ ಖಳನಾಯಕನಾಗಿ ಮಿಂಚಿರುವುದು. ನಾಯಕಿಯನ್ನು ಪ್ರೀತ್ಸೇ… ಎಂದು ಹಿಂದೆ ಬಿದ್ದು ಕಾಡುವ ಪಾತ್ರದಲ್ಲಿ ಪದ್ಮನಾಭ ರೆಡ್ಡಿ ಯಾವ ಖಳನಟರಿಗೂ ಕಮ್ಮಿಯಿಲ್ಲದೆ ಅಭಿನಯಿಸಿದ್ದಾರೆ.

ಚಿತ್ರದ ಸನ್ನಿವೇಶದಂತೆಯೇ ಚಿತ್ರೀಕರಿಸಲ್ಪಟ್ಟ ಸ್ಥಳ, ಎಂ.ಡಿ.ಕೌಶಿಕ್ ಕೆಮರಾ ಕೈಚಳಕ ಕೂಡಾ ಸಖತ್ತಾಗಿದೆ. ಚಿತ್ರದ ನಿರ್ದೇಶಕ ರಾಜಾ ರೆಡ್ಡಿ ತಮ್ಮ ಪ್ರಯತ್ನದಲ್ಲಿ ಗೆದ್ದಿದ್ದಾರೆ. ತಮ್ಮನ್ನು ಪ್ರೀತಿಸುವ ಜೀವಗಳಿಗಾಗಿ ಹಾತೊರೆದು ಪ್ರೇಮ ಪಯಣ ಆರಂಭಿಸಿದ ಜೋಡಿ ಅದು ಹೇಗೆ ತಮ್ಮೊಳಗೇ ಪ್ರೀತಿಯ ಬಂಧನದಲ್ಲಿ ಬೀಳುತ್ತವೆ ಅನ್ನೋದು ಚಿತ್ರ ನೋಡಿಯೇ ತಿಳಿಯಬೇಕು. ಅಂದಹಾಗೆ ಚಿತ್ರದ ಕ್ಲೈಮಾಕ್ಸ್ ಏನು ಆಗುತ್ತೆ ಅನ್ನೋದನ್ನು ಡಿಫರೆಂಟ್ ಆಗಿ ತೋರಿಸಿ ನಿರ್ದೇಶಕ ಜಾಣ್ಮೆಯನ್ನು ಮೆರೆದಿದ್ದಾರೆ.

ಸುವ್ವಿ ಚಿತ್ರ ರಾಜ್ಯಾದ್ಯಂತ ತೆರೆಕಂಡಿದ್ದು ಚಿತ್ರಪೇಮಿಗಳನ್ನು ಆಕರ್ಷಿಸುತ್ತಿದೆ. ಚಿತ್ರ ನೋಡಿಲ್ಲವಾದರೆ ಒಮ್ಮೆ ಚಿತ್ರವನ್ನು ನೋಡಿಬನ್ನಿ. ಯುವನಟ-ನಟಿಯರ ಹಾಗೆಯೇ ಪೋಷಕ ಪಾತ್ರಧಾರಿಗಳೂ ಚಿತ್ರಕ್ಕೆ ನ್ಯಾಯ ನೀಡಿದ್ದು ಗೆಲುವಿನ ಹಾದಿಯಲ್ಲಿದ್ದಾರೆ. ನಿರ್ಮಾಪಕ ಪದ್ಮನಾಭ ರೆಡ್ಡಿ, ನಟ ಅರ್ಜುನ್, ನಟಿಯರಾದ ರಮ್ಯಾ, ಮಾನಸಿ ಹಾಗೂ ಇಡೀ ಚಿತ್ರತಂಡಕ್ಕೆ ಯಶಸ್ಸನ್ನು ಹಾರೈಸೋಣ.

-ಶಶೀ.

By Suddi9

Leave a Reply

Your email address will not be published. Required fields are marked *