ಭಕ್ತಿ ಸೇವೆಯಾಗಲಿ: ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜಾ
ಸುದ್ದಿ9 ಮೂಡುಬಿದರೆ: ಅಲಂಗಾರು ಹೋಲಿ ರೋಸರಿ ಚರ್ಚ್ ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಾನುವಾರ ಜರುಗಿತು.ಪೂಜೆಯ ನೇತೃತ್ವ ವಹಿಸಿ ಮಾತನಾಡಿದ ಮಂಗಳೂರಿನ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಭಕ್ತಿ ಸೇವೆಯಾಗಿ ಪರಿವರ್ತನೆಯಾಗಲಿ ಎಂದರು. ಬಾಲಯೇಸು ಪುಣ್ಯಕ್ಷೇತ್ರದ ಧರ್ಮಗುರು ಹಾಗೂ ಕ್ಷೇತ್ರದ ನಿರ್ದೇಶಕ ವಂ.ಫಾ.ಬಾಸಿಲ್ ವಾಸ್ ಆಶೀವರ್ಚನ ನೀಡಿದರು.
ರೆ.ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ಹಬ್ವದ ಪ್ರಭೋದನೆ ನೀಡಿದರು. ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ಪಿ.ಕೆ.ಥೋಮಸ್, ಅನಿಲ್ ಲೋಬೋ ಉಪಸ್ಥಿತರಿದ್ದರು. 2 ಬಡಕುಟುಂಬಗಳಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು.9 ದಿನಗಳ ನವೇನಾ ಪ್ರಾರ್ಥನೆ, 3 ದಿನಗಳ ಧ್ಯಾನಕೂಟ, ಒಂದು ದಿನದ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 35 ಧರ್ಮಗುರುಗಳು, ನೂರಾರು ಧರ್ಮ ಭಗಿನಿಯರು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.


