‘ಸುದ್ದಿ9ಬಂಟ್ವಾಳ:ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಜನರ ಪರವಾಗಿ, ಬೀಡಿ ಕಾರ್ಮಿಕರು       ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ನಡೆಸುವ ಮೂಲಕ ಮಾದರಿ ನಾಯಕರಾಗಿ ದಿವಂಗತ ಬಿ. ಮಂಜುನಾಥ ಸಪಲ್ಯರು ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಸಾಮಾಜಿಕ ಹೋರಾಟಗಾರ ದಿ.ಬಂಟ್ವಾಳ ಮಂಜುನಾಥ ಸಪಲ್ಯ ಇವರಿಗೆ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ‘ನುಡಿನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೃತರು ಸ್ವತ: ಬೀಡಿ ಸಂಸ್ಥೆಯೊಂದರ ಮಾಲಿಕರಾಗಿದ್ದರೂ ಕಾರ್ಮಿಕ ರ ಪರವಾಗಿ ಕೆಲಸ ಮಾಡಿದ ಆದರ್ಶ ವ್ಯಕ್ತಿಯಾಗಿ, ಸಮಾಜದದಲ್ಲಿ ಎಲ್ಲಾ ಜಾತಿ ಧರ್ಮಕ್ಕೆ ಸೇರಿದ ಜನರೊಂದಿಗೆ ಸೌಹಾಧಯುತ ಸಂಬಂಧ ಬೆಳೆಸಿ ಅವರ ಕಷ್ಟಗಳಿಗೆ  ಅರ್ಥಿಕವಾಗಿ  ಸ್ಪಂದಿಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೃತರ ಸ್ಮರಣಾರ್ಥ ಪಾಣೆಮಂಗಳೂರಿನಲ್ಲಿ ಒಂದು ಸುಸಜ್ಜಿತ ಬಸ್ ತಂಗುದಾಣ ನಿಮರ್ಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಭಗವಾನ್ ಶ್ರೀ ನಿತ್ಯಾನಂದ, ಗೋವಿಂದ ಸ್ವಾಮಿಜಿ ಅವರ ಪರಮ ಭಕ್ತರಾಗಿದ್ದ ಮಂಜುನಾಥ ಸಪಲ್ಯರು ತನ್ನ ಸ್ವಪರಿಶ್ರಮದಿಂದ ಬೆಳೆದು ತೆರೆದ ಪುಸ್ತಕದಂತೆ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ಮಾತನಾಡಿ, ಮೃತರ ಸಾಧನೆ ದಾಖಲಿಸಲು ‘ಸಂಸ್ಮರಣಾ ಗ್ರಂಥ’ ಪ್ರಕಟಿಸುವುದಕ್ಕೆ   ಅವರ ಒಡನಾಡಿಗಳು ಸಹಿತ ಎಲ್ಲರೂ ಕೈಜೋಡಿಸಬೇಕು ಎಂದರು.
ಉದ್ಯಮಿ ಲಕ್ಷ್ಮಣ ಎ. ಬಾಳಿಗಾ ಬಂಟ್ವಾಳ, ಸಿಪಿಎಂ ಮುಖಂಡ ವಾಸು ಗಟ್ಟಿ, ಸಿಪಿಐ ಮುಖಂಡ ಪಿ. ಸಂಜೀವ, ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮಂಗಳೂರು ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್, ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರ ಆಡಳಿತ ಮೊಕ್ತೇಸರ ಎಸ್. ರಮೇಶ್, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಮಾಜಿ ಆಡಳಿತ ಮೊಕ್ತೇಸರ ಯು. ಎಸ್.ಪ್ರಕಾಶ್, ಮಂಜೇಶ್ವರ ಶ್ರೀ ಕೀತರ್ೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಬಿ.ಎಂ. ಕಮಲಾಕ್ಷ, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಸಪಲ್ಯ ಮದರ್ೊಳಿ ಮತ್ತಿತರರು ಮೃತರಿಗೆ ನುಡಿ ನಮನ ಸಲ್ಲಿಸಿದರು. ಬಂಟ್ವಾಳ ತಾ.ಪಂ.ಸದಸ್ಯ ಮಾಧವ ಎಸ್.ಮಾವೆ, ವಿವಿಧ ತಾಲ್ಲೂಕು ಗಾಣಿಗ ಸಂಘ ಹಾಗೂ ವಿವಿಧ ಕಾಮರ್ಿಕ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.
ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸ್ವಾಗತಿಸಿ, ಸಂಘದ ಜೊತೆ ಕಾರ್ಯದಶರ್ಿ ಅಶೋಕ ಕುಮಾರ್ ಬರಿಮಾರು ವಂದಿಸಿದರು.  ಸುಮಂಗಲಾ ಕ್ರೆಡಿಟ್ ಸೊಸೈಟಿ ನಿದರ್ೇಶಕ ಮೋಹನ್ ಕೆ. ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.

01
—

By Suddi9

Leave a Reply

Your email address will not be published. Required fields are marked *