ಬಂಟ್ವಾಳ: ಬಿ.ಸಿ.ರೋಡ್ ಕೈಕುಂಜೆ ಪೂರ್ವ ಬಡಾವಣೆಗೆ ಹೋಗುವ ರಸ್ತೆಯಲ್ಲಿ `ಕೈಕುಂಜೆ ಪೂರ್ವ ಬಡಾವಣೆ’ ಎಂಬ ತುಳು ಮತ್ತು ಕನ್ನಡದ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಕೈಕುಂಜೆ ಅಭಿವೃದ್ಧಿ ಸಂಘದವರು ತುಳು ಲಿಪಿಕಾರ ಬಿ.ತಮ್ಮಯ್ಯ ರವರಿಂದ ಬರೆಸಿದ ತುಳು ಮತ್ತು ಕನ್ನಡ ನಾಮಫಲಕವನ್ನು ಅನಾವರಣಗೊಳಿಸಿ, ವಿಶ್ವ ತುಳು ಪರ್ಬ ಸಂದರ್ಭದ ಸವಿನೆನಪಿಗಾಗಿ ಈ ತುಳು ನಾಮಫಲಕವನ್ನು ಅನಾವರಣಗೊಳಿಸಿರುವುದಾಗಿ ಅಭಿವೃದ್ಧಿ ಸಂಘದವರು ತಿಳಿಸಿದ್ದಾರೆ. ಪತ್ರಕರ್ತ ಹರೀಶ್ ಮಾಂಬಾಡಿ, ಪದ್ಮನಾಭ ರಾವ್, ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.


