ಮೂಡುಬಿದರೆ: ಹುಡಗಿಯ ಪ್ರೀತಿಗಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಂತೆ ವೇಷ ಬದಲಾಯಿಸಿ ಫೇಸ್ಬುಕ್ನಲ್ಲಿ ಯುವತಿಗೆ ವಂಚಿಸಿದಕ್ಕೆ ಮುಸ್ಲಿಂ ಯುವಕನ ವಿರುದ್ಧ ಹಾಗೂ ಈ ಯುವಕನಿಗೆ ಹಲ್ಲೆ ನಡೆಸಿದ ಐವರು ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಕೋಟೆಬಾಗಿಲಿನ ಇಮ್ತಿಯಾಝ್ ಎಂಬಾತ ಕೈಗೆ ಕೆಂಪು ನೂಲು ಕಟ್ಟಿ, ಕತ್ತಿಗೆ ಕೇಸರಿ ಶಾಲು ಹಾಕಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಸಂಪರ್ಕ ಬೆಳೆಸಿ ತಾನು ಹಿಂದೂ ಎಂದು ನಂಬಿಸಿ ಆಕೆಯನ್ನು ಲವ್ ಮಾಡಲು ಶುರು ಮಾಡಿದ್ದು ಯುವತಿ ಕೂಡ ಈತನನ್ನು ನಂಬಿದಳೆನ್ನಲಾಗಿದೆ. ಆದರೆ ಈ ಲವ್ ಪ್ರಕರಣದ ಯುವಕ ಮುಸ್ಲಿಂ ಎಂದು ಹಿಂದೂ ಕಾರ್ಯಕರ್ತರಿಗೆ ಗೊತ್ತಾಗಿ ಗುರುವಾರ ಸಚಿನ್ ಸುನಿಲ್, ಪ್ರಸಾದ್, ವಿನಾಯಕ ಮತ್ತು ನವೀನ್ ಆರೋಪಿಗೆ ಸ್ವರಾಜ್ಯ ಮೈದಾನದಲ್ಲಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಬಗ್ಗೆ ಇಮ್ತಿಯಾಝ್ ಎಂಬಾತ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇಮ್ತಿಯಾಝ್ ಎಂಬಾತ ಫೇಸ್ಬುಕ್ನಲ್ಲಿ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಮಹೇಶ್ ಎಂಬ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ ತೆರೆದು ಹುಡುಗಿಯನ್ನು ವಂಚಿಸಿದ್ದಾನೆ ಎಂದು ನವೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಎರಡೂ ಕಡೆಯವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಮೂಡುಬಿದರೆ ನ್ಯಾಯಾಯಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ಜಾಮೀನು ದೊರಕಿದೆ.
ನಕಲಿ ಖಾತೆ ಜೀವಂತ:
ವಿವಾದಕ್ಕೆನ ಕಾರಣವಾದ ಮುಸ್ಲಿಂ ಯುವಕನ ಹಿಂದೂ ಹೆಸರಿನ ಫೇಸ್ಬುಕ್ ಖಾತೆ ಗುರುವಾರ ನಡೆದ ಪ್ರಕರಣದ ನಂತರವೂ ಚಾಲನೆ ಇತ್ತು. ಗುರುವಾರ 12 ಗಂಟೆಯ ಸುಮಾರಿಗೆ ಯುವಕನ ಫೋಟೋ ತೆಗೆದು ಮಗುವಿನ ಚಿತ್ರವನ್ನು ಹಾಕಲಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮತ್ತೆ ಯುವಕನ ಚಿತ್ರವನ್ನು ಪ್ರೋಫೈಲ್ ಹಾಗೂ ಕವರ್ ಪೇಜ್ನಲ್ಲಿ ಹಾಕಲಾಗಿತ್ತು.

