ಸುದ್ದಿ9ಪುತ್ತೂರು ; ಕರ್ನಾಟಕ ಸರ್ಕಾ ರದ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹಧನಕ್ಕೆ ಪತ್ರಕರ್ತ, ರಂಗನಿರ್ದೆಶಕ ಮೌನೇಶ ವಿಶ್ವಕರ್ಮ ರವರ ಮಕ್ಕಳ ಮಾತು ಹಸ್ತಪ್ರತಿ ಆಯ್ಕೆಯಾಗಿದೆ.
ಬಂಟ್ವಾಳದಿಂದ ಪ್ರಕಟವಾಗುವ ನಮ್ಮ ಬಂಟ್ವಾಳ ಪತ್ರಿಕೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮನಸ್ಥಿತಿ ಯ ಕುರಿತಾಗಿ ನಿರಂತರ ಮೂವತ್ತು ವಾರಗಳ ಕಾಲ ಇವರು ಬರೆದಿರುವ ಮಕ್ಕಳ ಮಾತು ಅಂಕಣದ 27 ಲೇಖನಗಳು ಪ್ರಾಧಿಕಾರದ ನೆರವಿನಿಂದ ಪುಸ್ತಕರೂಪದಲ್ಲಿ ಮುಂದಿನ ನವೆಂಬರ್ ನಲ್ಲಿ ಪ್ರಕಟಗೊಳ್ಳಲಿದೆ.
ಕನರ್ಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ ದ.ಕ.ಜಿಲ್ಲಾ ಸಮಿತಿಯ ಸದಸ್ಯರಾಗಿರುವ ಇವರು, ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದು ಕಳೆದ ಹನ್ನೆರಡು ವರ್ಷಗಳಿಂದ ಪತ್ರಿಕಾರಂಗ ಹಾಗೂ ಮಕ್ಕಳ ರಂಗಭೂಮಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ 2007 ರಲ್ಲಿ ಕೇಂದ್ರ ಸಕರ್ಾರ ನೀಡುವ ಯುವ ಕಲಾವಿದರ ಸ್ಕಾಲರ್ಶಿಪ್ ಹಾಗೂ 2011 ರಲ್ಲಿ ಯುನಿಸೆಫ್ ಹಾಗೂ ಕನರ್ಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ನೀಡುವ “ಮಾಧ್ಯಮ ಫೆಲೋಷಿಫ್-2011” ಗೆ ಮೌನೇಶ್ ಆಯ್ಕೆಯಾಗಿದ್ದರು. ಬಂಟ್ವಾಳದಿಂದ ವಾತರ್ಾಭಾರತಿ, ಕನ್ನಡ ಪ್ರಭ, ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರರಾಗಿರುವ ಮೌನೇಶ್ ಮಕ್ಕಳ ರಂಗಚಟುವಟಿಕೆಯಲ್ಲೂ ಸಕ್ರೀಯರಾಗಿದ್ದು ಮಕ್ಕಳ ಹಕ್ಕುಗಳ ಕುರಿತಾದ ಹಲವು ಕಿರು ನಾಟಕಗಳನ್ನು ರಚಿಸಿದ್ದು, ನಾಟಕ ರಂಗ ಹಾಗೂ ಮಕ್ಕಳಹಕ್ಕುಗಳ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

mounesh photo

By Suddi9

Leave a Reply

Your email address will not be published. Required fields are marked *