ಬಂಟ್ವಾಳ ತಾಲ್ಲೂಕಿನ ಜೈನ್ ಮಿಲನ್ ವತಿಯಿಂದ ವಗ್ಗದಲ್ಲಿ ಭಾನುವಾರ ನಡೆದ ಛದ್ಮವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಪಿ.ಜಿನರಾಜ ಅರಿಗ ಅವರು ಸಾಧಕರನ್ನು ಸನ್ಮಾನಿಸಿದರು.

ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೃಷಭರಾಜ್ ಇಂದ್ರ, ಜಿಲ್ಲಾ ನಿರ್ಧೇಶಕ ಸುದರ್ಶನ್ ಜೈನ್, ರಾಜಶ್ರೀ ಎಸ್. ಹೆಗ್ಡೆ ಬೆಳ್ತಂಗಡಿ, ರಾಜಶೇಖರ ಜೈನ್ ಪುತ್ತೂರು, ಇಚ್ಲಂಪ್ಪಾಡಿ ಯಶೋಧರ್ ಶೆಟ್ಟಿ , ಮನ್ಮಥ್ ಜೈನ್ ಬೆಳ್ತಂಗಡಿ, ಸುಭಾಶ್ಚಂದ್ರ ಜೈನ್, ಡಾ.ಸುದೀಪ್, ಭರತ್ ಕುಮಾರ್ ಮತ್ತಿತರರು ಇದ್ದರು.
